ಕೇವಲ ಎರಡು ಪದಾರ್ಥಗಳಲ್ಲಿ ಮಾಡಿ ಒರಿಯೋ ಸೂಸಿ! | Recipe

untitled-design-2025-09-30t181757806-68dbd184925a8
Published on

Recipe: ಬೇಕರಿ ಶೈಲಿಯ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಖಾದ್ಯ ಪ್ರಿಯರು ಸಿಹಿತಿಂಡಿಗಾಗಿ ಅನೇಕ ಕಡೆ ಪಯಣವನ್ನು ಬಯಸುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಇಂದು ನಾವು ಒರಿಯೋ ಬಿಸ್ಕೇಟ್​ಗಳಲ್ಲಿ ಮಾಡುವ ಒಂದು ರುಚಿಯಾದ ಖಾದ್ಯವನ್ನು ತಿಳಿಸಿಕೊಡಲಿದ್ದೇವೆ. ಇದನ್ನು ನಿಮ್ಮ ಮಕ್ಕಳಿಗೆ, ಹಿರಿಯರಿಗೆ ತಿನ್ನಲು ಕೊಡಬಹುದಾದಂತಹ ಒಂದು ತಿಂಡಿಯಾಗಿದೆ.

ಬೇಕಾಗುವ ಪದಾರ್ಥಗಳು

* ಒರಿಯೋ ಬಿಸ್ಕೇಟ್​ಗಳು

* ¼ ಕಪ್ ಹಾಲು

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಪ್ಯಾಕ್ ಒರಿಯೋ ಬಿಸ್ಕೇಟ್​ಗಳನ್ನು ತೆಗೆದುಕೊಂಡು ಅದರಲ್ಲಿರುವ ಕ್ರೀಮ್​ ಹಾಗೂ ಬಿಸ್ಕೇಟ್​ಗಳನ್ನು ಬೇರೆ ಬೇರೆ ಮಾಡಿ ಇಟ್ಟುಕೊಳ್ಳಿ. ತದನಂತರ ಬಿಸ್ಕೇಟ್​ಗಳನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ಪುಡಿ ಮಾಡಿದ ಬಿಸ್ಕೇಟ್​ಗಳಿಗೆ ಸ್ವಲ್ಪ ಹಾಲು ಸೇರಿಸಿ ಮಿಕ್ಸ್​ ಮಾಡಿ. ನಂತರ ಉಂಡೆ ಮಾಡಿಕೊಂಡು ಅದನ್ನು ಚೌಕಾಕಾರದಲ್ಲಿ ಉದ್ದಿಕೊಳ್ಳಿ. ಇದಾದ ಬಳಿಕ ಕ್ರೀಮ್​ಗೆ ಹಾಲು ಸೇರಿಸಿ ಮಿಕ್ಸ್​ ಮಾಡಿಕೊಳ್ಳಿ. ನಂತರ ಕ್ರೀಮ್​ನ್ನು ಉದ್ದಿಕೊಂಡ ಎಲೆಗೆ ಹಚ್ಚಿ ಸುರುಳಿ ಆಕಾರದಲ್ಲಿ ಸುತ್ತಿರಿ. ಈಗ ಅವುಗಳನ್ನು ದುಂಡು ದುಂಡಾಗಿ ಕತ್ತರಿಸಿ ಸವಿಯಿರಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net