

Beauty tips : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮುಖವು ಹೊಳೆಯುವಂತೆ ಹಾಗೂ ಸೌಂದರ್ಯದಿಂದ ಕಾಣುವಂತೆ ಮಾಡಲು ಹಲವಾರು ಕ್ರೀಮ್ಗಳ ಮೊರೆಹೋಗುತ್ತಾರೆ. ಹಾಗೆಯೇ ಟ್ರೀಟ್ಮೆಂಟ್ ಮಾಡಿಸಿಕೊಳ್ಳುತ್ತಾರೆ. ಅವೆಲ್ಲವೂ ಕ್ಷಣಿಕ ಮಾತ್ರ. ಹಾಗಾಗಿ ನಿಮ್ಮ ಆರೋಗ್ಯದ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಂಡಾಗ ನಿಮ್ಮ ಚರ್ಮ ಸುಂದರ ಹಾಗು ಮೃದುವಾಗಿಡುವಂತೆ ಸಹಾಯ ಮಾಡುತ್ತದೆ. ಹಾಗಾಗಿ ಈ 6 ಪರಿಣಾಮಕಾರಿ ಅಭ್ಯಾಸಗಳನ್ನು ಇಂದಿನಿಂದಲೇ ಪ್ರಯತ್ನಿಸಿ.. ಇವು ನಿಮ್ಮ ಆರೋಗ್ಯದ ಜೊತೆಗೆ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ನೀರು ಚರ್ಮದ ಅತ್ಯುತ್ತಮ ಸ್ನೇಹಿತ. ದಿನವಿಡೀ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದರಿಂದ ನಿಮ್ಮ ಚರ್ಮವು ಹೊಳೆಯುವಂತೆ ಮಾಡುತ್ತದೆ. ಪ್ರತಿದಿನ 3 ರಿಂದ 4 ಲೀಟರ್ ನೀರನ್ನು ಕುಡಿಯಿರಿ ಹಾಗೆಯೇ, ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆಯಂತಹ ಆಹಾರ ಪದಾರ್ಥಗಳನ್ನು ಸೇವಿಸಿ ಇದು ನಿಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಸ್ವಚ್ಛವಾದ ಚರ್ಮವು ಆರೋಗ್ಯಕರ ಹೊಳಪಿನ ಅಡಿಪಾಯವಾಗಿದೆ. ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವಂತಹ ಕ್ಲೆನ್ಸರ್ಗಳನ್ನು ದಿನಕ್ಕೆ 2 ಸಲ ಬಳಸಿ ಮುಖ ತೊಳೆಯಿರಿ. ಇದು ಮುಖದಲ್ಲಿರುವ ಧೂಳು, ಬೆವರನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಹಾಗೆಯೇ ಬಲವಾದ ಸೋಪುಗಳನ್ನು ಬಳಸಬೇಡಿ ಇದು ಚರ್ಮವನ್ನು ಒಣಗಿಸುತ್ತದೆ.
ಮುಖದಲ್ಲಿ ಕೂರುವ ಧೂಳಿನಿಂದ ಚರ್ಮವು ಆದಷ್ಟು ಹದಗೆಡುತ್ತದೆ. ಹಾಗಾಗಿ ಅವುಗಳನ್ನು ತೆಗೆದುಹಾಕಿ ಹೊಸ ಕೋಶವನ್ನು ಬೆಳವಣಿಗೆಯನ್ನು ಉತ್ತೇಜಿಸಲು ವಾರಕ್ಕೆ 1-2 ಬಾರಿ ಉತ್ತಮವಾದ ಸ್ಕ್ರಬ್ಗಳನ್ನು ಬಳಸಿರಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೀವು ಸೇವಿಸುವ ಆರೋಗ್ಯಕರ ಪದಾರ್ಥಗಳು ನಿಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಹಾಗೆಯೇ ಪೌಷ್ಟಿಕಾಂಶ ಇರುವಂತಹ ಆಹಾರಗಳಾದ ಕಾಳುಗಳು, ಹಸಿರು ತರಕಾರಿಗಳು, ಹಣ್ಣುಗಳು ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುತ್ತದೆ. ಇವು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಚರ್ಮವನ್ನು ರಿಫ್ರೆಶ್ ಮಾಡಲು ಹಾಗೂ ಹೊಳೆಯುವಂತೆ ಮಾಡಲು ನೈಸರ್ಗಿವಾದಂತಹ ಫೇಸ್ ಮಾಸ್ಕ್ಗಳನ್ನು ಬಳಸಿ. ಅರಿಶಿನ, ಜೇನುತುಪ್ಪ, ಮೊಸರು ಮತ್ತು ಅಲೋವೆರಾದಂತಹ ಪದಾರ್ಥಗಳು ಹೊಳಪು ಮತ್ತು ಶಮನಗೊಳಿಸಲು ಉತ್ತಮವಾಗಿವೆ. ಹಾಗಾಗಿ ಇವುಗಳನ್ನು ಮನೆಯಲ್ಲಿ ಪ್ರಯತ್ನಿಸಿರಿ.
ಚರ್ಮದ ನವೀಕರಣಕ್ಕೆ ವಿಶ್ರಾಂತಿ ಅತ್ಯಗತ್ಯ. ನಿದ್ರೆಯ ಕೊರತೆ ಮತ್ತು ಹೆಚ್ಚಿನ ಒತ್ತಡದ ಮಟ್ಟಗಳು ಚರ್ಮವನ್ನು ಮಂದತೆ, ಕಪ್ಪು ವರ್ತುಲಗಳು ಮತ್ತು ಮೊಡವೆಗಳಿಗೆ ಕಾರಣವಾಗಬಹುದು. ಹಾಗಾಗಿ ದಿನಕ್ಕೆ 7–8 ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸಿ ಮತ್ತು ಧ್ಯಾನ, ಯೋಗ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳಂತಹ ಒತ್ತಡ-ನಿವಾರಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ