ನೀವು ಬೆಳಗ್ಗೆ ಎದ್ದಾಗ ಈ ಲಕ್ಷಣ ಕಾಣುತ್ತಿವೆಯೇ? ಹಾಗಿದ್ರೆ ಜಾಗರೂಕರಾಗಿರಿ ಇದು ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು| lifestyle

sleep
Published on

lifestyle; ನಾವೆಲ್ಲರೂ ರಾತ್ರಿ ಮಲಗಿಕೊಂಡು ಬೆಳಗ್ಗೆ ಮೇಲೇಳುವಾಗ ದೇಹದಲ್ಲಿ ಕೆಲ ಬದಲಾವಣೆಗಳಾಗುವುದನ್ನು ಗಮನಿಸಿರುತ್ತೇವೆ. ಬೆಳಗ್ಗೆ ಎದ್ದಾಗ ಕಾಣಿಸುವ ಕೆಲವು ಲಕ್ಷಣಗಳು ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿವೆ ಎಂದು ಹೇಳಲಾಗಿದೆ. ತೀವ್ರವಾದ ತಲೆನೋವು, ಎದೆನೋವು, ಉಸಿರಾಟದ ತೊಂದರೆ, ಒಂದು ಬದಿಯ ದೌರ್ಬಲ್ಯ, ಗೊಂದಲ, ಹೃದಯಾಘಾತ, ಸ್ಟ್ರೋಕ್, ಅಥವಾ ಇತರ ಗಂಭೀರ ಕಾಯಿಲೆಗಳ ಮುನ್ಸೂಚನೆಯಾಗಿರಬಹುದು.

ಗಂಭೀರ ಕಾಯಿಲೆಯ ಲಕ್ಷಣಗಳು;

ದಿಢೀರ್ ದೃಷ್ಟಿ ಸಮಸ್ಯೆನಿರಂತರ ಕೆಮ್ಮು ಅಥವಾ ಗಂಟಲು ನೋವು ಸಾಮಾನ್ಯ ಕೆಮ್ಮಿನಿಂದ ಭಿನ್ನವಾಗಿರುತ್ತದೆ. ಇದು ವಾರಗಳವರೆಗೆ ನಿಮ್ಮಲ್ಲಿ ಕಾಣಿಸಿಕೊಂಡರೆ ಇದನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದು ಹೇಳಲಾಗಿದೆ. ಏಕೆಂದರೆ ಇದು ಕೆಲವೊಮ್ಮೆ ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಯಾಗಿರಬಹುದು ಎನ್ನಲಾಗಿದೆ.

ತೀವ್ರ ಜ್ವರ ಅಥವಾ ಶೀತ

ಒಂದು ಬದಿಯ ದೌರ್ಬಲ್ಯ ಅಥವಾ ಮರಗಟ್ಟುವಿಕೆ

ಉಸಿರಾಟದ ತೊಂದರೆ

ದಿಢೀರ್ ತಲೆನೋವು ಅಥವಾ ಗೊಂದಲ

ತೀವ್ರ ಎದೆನೋವು ಅಥವಾ ಒತ್ತಡ

ಇನ್ನೂ ರಾತ್ರಿ ಸಮಯದಲ್ಲಿ ಅತಿಯಾದ ಬೆವರುವುದು ಸಹ ಕ್ಯಾನ್ಸರ್, ಸೋಂಕು ಅಥವಾ ಮಧುಮೇಹದಂತಹ ಇತರ ಗಂಭೀರ ಕಾಯಿಲೆಗಳನ್ನು ಸೂಚಿಸುವ ಪ್ರಕ್ರಿಯೆಯಾಗಿದೆ. ಜೊತೆಗೆ ಆಯಾಸ, ತೂಕ ನಷ್ಟವಾಗಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಬಹುಮುಖ್ಯ. ಬೆಳಗ್ಗೆ ಎದ್ದ ಬಳಿಕ ತುಂಬಾ ದಣಿವು, ತುಂಬಾ ದುರ್ಬಲ ಭಾವನೆಯ ಲಕ್ಷಣ ಕಂಡುಬರುತ್ತಿದ್ದರೆ, ಇದು ದೈಹಿಕ ಸಮಸ್ಯೆಯ ಸಂಕೇತ ಆಗಿರಬಹುದು. ಈ ದೌರ್ಬಲ್ಯವು ದಿನವಿಡೀ ಮುಂದುವರಿದರೆನೀವು ವೈದ್ಯರನ್ನು ಸಂಪರ್ಕಿಸಬೇಕು.

ಗಂಭೀರ ಲಕ್ಷಣಗಳಿಗೆ ಸಲಹೆ

ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ: ಎದೆನೋವು, ಉಸಿರಾಟದ ತೊಂದರೆ, ದಿಢೀರ್ ತಲೆನೋವು, ಒಂದು ಬದಿಯ ದೌರ್ಬಲ್ಯ, ಅಥವಾ ಗೊಂದಲದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ 108 ಗೆ ಕರೆ ಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ತೆರಳಿ.

ಲಕ್ಷಣಗಳನ್ನು ಗಮನಿಸಿ: ಲಕ್ಷಣಗಳು ಯಾವಾಗ ಶುರುವಾಯಿತು, ಎಷ್ಟು ತೀವ್ರವಾಗಿದೆ ಮತ್ತು ಇತರ ರೋಗಲಕ್ಷಣಗಳು ಇವೆಯೇ ಎಂದು ಗಮನಿಸಿ.

ಆರೋಗ್ಯ ದಾಖಲೆ ಇರಿಸಿಕೊಳ್ಳಿ: ರಕ್ತದೊತ್ತಡ, ಸಕ್ಕರೆ ಮಟ್ಟ, ಅಥವಾ ಇತರ ಆರೋಗ್ಯ ಸಂಬಂಧಿತ ಮಾಹಿತಿಯನ್ನು ದಾಖಲಿಸಿ.

ನಿಯಮಿತ ಆರೋಗ್ಯ ತಪಾಸಣೆ: ರಕ್ತದೊತ್ತಡ, ಕೊಲೆಸ್ಟ್ರಾಲ್, ಮತ್ತು ಸಕ್ಕರೆಯಂತಹ ಮೂಲಭೂತ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ.

ಆರೋಗ್ಯಕರ ಜೀವನಶೈಲಿ: ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ಮತ್ತು ಸಾಕಷ್ಟು ನಿದ್ದೆಯನ್ನು ಕಾಪಾಡಿಕೊಳ್ಳಿ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net