ಮಕರಜ್ಯೋತಿಯ ದರ್ಶನದಿಂದ ಪಾವನರಾದ ಅಯ್ಯಪ್ಪ ಭಕ್ತವೃಂದ..

Ayyappa
Published on

ಕೇರಳ: ಶ್ರೀ ಅಯ್ಯಪ್ಪಸ್ವಾಮಿಯ ಕ್ಷೇತ್ರವಾದ ಶಬರಿಮಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ವಿದ್ಯಮಾನಕ್ಕೆ ಇಂದು ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದು, ಮಕರಜ್ಯೋತಿಯ ದರ್ಶನ ಪಡೆದು ಪಾವನರಾದರು. ಕೇರಳದ ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂಡಿದ ಮಕರಜ್ಯೋತಿಯನ್ನು ಅಯ್ಯಪ್ಪ ಭಕ್ತಾದಿಗಳು ವೀಕ್ಷಿಸಿ, ಧನ್ಯತಾ ಭಾವವನ್ನು ಅನುಭವಿಸಿದರು.

ಪ್ರತಿವರ್ಷ ಮಕರ ಸಂಕ್ರಮಣದ ಸಂದರ್ಭದಲ್ಲಿ ಈ ಮಕರಜ್ಯೋತಿಯ ದರ್ಶನವಾಗುತ್ತಿದ್ದು, ಈ ವರ್ಷ ಇಂದು ಮಕರಜ್ಯೋತಿಯ ದರ್ಶನವಾಗಿದೆ. ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮೂಡಿದ ಮಕರಜ್ಯೋತಿಯನ್ನು ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಭಕ್ತಿಪರವಶತೆಯ ಹರ್ಷೋದ್ಗಾರದೊಂದಿಗೆ ಭಕ್ತರು ಕಣ್ತುಂಬಿಕೊಂಡರು.

ಅತ್ಯಂತ ಮಹತ್ವದ ವಿದ್ಯಮಾನವಾದ ಇದರ ದರ್ಶನಕ್ಕೆಂದೇ ಸಹಸ್ರಾರು ಭಕ್ತರು ಶಬರಿಮಲೆಗೆ ಬಂದಿದ್ದು, ಕೆಲವು ಗಂಟೆಗಳಿಂದ ಇದಕ್ಕಾಗಿ ಕಾದಿದ್ದರು. ಕೊನೆಗೂ ಕಾಣಿಸಿದ ಮಕರಜ್ಯೋತಿಯನ್ನು ಕಂಡು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಳದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net