ರಾಜಸ್ಥಾನದಲ್ಲಿ ಕಾಂಗ್ರೆಸ್​ ಇಬ್ಭಾಗ!: ಪಕ್ಷದಲ್ಲಿ ಸಂಚಲನ, ಯಾರ ಕೈ ಮೇಲು?

Rajasthan
Published on

ರಾಜಸ್ಥಾನ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಕಾಂಗ್ರೆಸ್​ನಲ್ಲಿ ಭಾರಿ ಸಂಚಲನ ಮೂಡಿದ್ದು, ಅಲ್ಲಿ ಪಕ್ಷ ಒಂದು ರೀತಿಯಲ್ಲಿ ಇಬ್ಭಾಗವಾದಂತಾಗಿದೆ. ಮಾತ್ರವಲ್ಲ, ಗೆಹ್ಲೋಟ್ ವರ್ಸಸ್​ ಪೈಲಟ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾರ ಕೈ ಮೇಲಾಗಲಿದೆ ಎಂಬ ಕುತೂಹಲವೂ ಉಂಟಾಗಿದೆ.

ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಸ್ಥಾನದಿಂದ ಇಳಿದರೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ವಿಷಯದ ಸಲುವಾಗಿ ಹಲವು ಶಾಸಕರು ರಾಜೀನಾಮೆ ಕೊಡಲಿಕ್ಕೂ ಸಜ್ಜಾಗಿದ್ದಾರೆ.

ಅಶೋಕ್​ ಗೆಹ್ಲೋಟ್​ ಮುಖ್ಯಮಂತ್ರಿ ಸ್ಥಾನದಿಂದ ಇಳಿದರೆ ಸಚಿನ್ ಪೈಲಟ್​ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯ ಒಂದೆಡೆಯಾದರೆ, ಇನ್ನೊಂದೆಡೆ 102 ಶಾಸಕರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದ್ದು, ಈ ವಿಚಾರವಾಗಿ ಶಾಸಕರಲ್ಲಿ ಎರಡು ಗುಂಪು ಸೃಷ್ಟಿಯಾಗಿದೆ. ಒಂದು ಗುಂಪು ಗೆಹ್ಲೋಟ್ ಬೆನ್ನಿಗಿದ್ದರೆ ಇನ್ನೊಂದು ಪೈಲಟ್ ಬೆನ್ನಿಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net