

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕೆಲವು ರೈತ ಪರ ಸಂಘಟನೆಗಳು ಬಹುತೇಕ, ಪಂಜಾಬ್, ಹರಿಯಾಣದ ಸಂಘಟನೆಗಳವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಬಂದ್ಗೆ ಪ್ರಮುಖ ರೈತ ಸಂಘಟನೆಗಳು ಬೆಂಬಲ ನೀಡಿಲ್ಲ. ವಿದೇಶಿ ಶಕ್ತಿಗಳು ಆಂದೋಲದನ ಹಾದಿಯನ್ನು ತಪ್ಪಿಸಲೆತ್ನಿಸುತ್ತಿವೆ ಎಂದು ದೇಶದ ಪ್ರಮುಖ ರೈತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಭಾರತೀಯ ಕಿಸಾನ್ ಸಂಘ (ಬಿಕೆಎಸ್)ದ ರಾಷ್ಟ್ರೀಯ ಕಾರ್ಯದರ್ಶಿ ಮೋಹಿನಿ ಮಿಶ್ರಾ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ರೈತರ ಪ್ರತಿಭಟನೆಯ ಹಾದಿ ತಪ್ಪಿಸುವ ಕೆಲಸವನ್ನು ವಿದೇಶಿ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಮಾಡುತ್ತಿವೆ. ಲಂಡನ್ ಮತ್ತು ಕೆನಡಾಗಳಲ್ಲಿ ನಡೆದ ಪ್ರತಿಭಟನೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಕೃಷಿ ಕಾನೂನು ರಚನೆ ಆಗಿರುವುದು ರೈತಪರ ಹಿತದೃಷ್ಟಿಯಿಂದಲೇ ಹೊರತು ಬೇರಾವ ಉದ್ದೇಶದಿಂದಲೂ ಅಲ್ಲ.ಈ ಕಾನೂನುಗಳಲ್ಲಿ ತಿದ್ದುಪಡಿ ಆಗಬೇಕಾಗಿರುವುದು ನಿಜ. ಆದರೆ, ಪೂರ್ತಿಯಾಗಿ ಕಾನೂನು ಹಿಂಪಡೆಯಬೇಕೆಂಬ ವಾದ, ಬೇಡಿಕೆಯನ್ನು ಒಪ್ಪಲಾಗದು.ಭಾರತ್ ಬಂದ್ಗೆ ಬೆಂಬಲ ಇಲ್ಲ ಎಂದು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಯಾವುದೇ ಮಾರುಕಟ್ಟೆಯಲ್ಲೂ ಕೃಷಿ ಉತ್ಪನ್ನ ಖರೀದಿಯಾಗಬಾರದು.ಸರ್ಕಾರದ ಪೋರ್ಟಲ್ಗಳಲ್ಲಿ ಖರೀದಿದಾರರ ಸಂಪೂರ್ಣ ವಿವರ ಲಭ್ಯ ಇರಬೇಕು. ಕೃಷಿ ನ್ಯಾಯಾಧಿಕರಣ ರಚನೆಯಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.(ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..