ಕಾಡುಹಂದಿ ದಾಳಿಗೆ ಮೆಕ್ಕೆಜೋಳ ನಾಶ

25 BIRUR 01
ದೇವರಹಳ್ಳಿ ಗ್ರಾಮದಲ್ಲಿ ಕಾಡುಹಂದಿಗಳ ದಾಳಿಯಿಂದ ಹಾನಿಗೀಡಾದ ಮೆಕ್ಕೆಜೋಳದ ಬೆಳೆ.
Published on

ಬೀರೂರು: ಈ ವರ್ಷ ಮಳೆ ಅಭಾವದಿಂದ ರೈತ ತತ್ತರಿಸಿ ಹೋಗಿದ್ದಾನೆ. ಕೊಳವೆಬಾವಿಯಿಂದ ನೀರುಣಿಸಿ ಬೆಳೆಸಿದ ಅಡಕೆ, ತೆಂಗಿನ ಸಸಿ ಹಾಗೂ ಮುಸುಕಿನ ಜೋಳವನ್ನು ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಿದೆ.

ಬೀರೂರು ಸಮೀಪದ ದೇವರಹಳ್ಳಿ ಗ್ರಾಮದ ಬಿ.ವಿ.ಮರುಳಸಿದ್ದಪ್ಪ ಎಂಬುವರ ಮೆಕ್ಕೆಜೋಳದ ಹೊಲಕ್ಕೆ ಭಾನುವಾರ ರಾತ್ರಿ ಕಾಡುಹಂದಿಗಳು ದಾಳಿ ಮಾಡಿ ಬೆಳೆ ನಾಶ ಮಾಡಿವೆ. ಅಡಕೆ ಹಾಗೂ ತೆಂಗಿನ ಸಸಿಗಳನ್ನು ಸಹ ಧ್ವಂಸಗೊಳಿಸಿವೆ. ವನ್ಯಜೀವಿಗಳ ದಾಳಿಯಿಂದ ಉಂಟಾಗುವ ಬೆಳೆಹಾನಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ರೈತರಿಗೆ ಈ ಆಗುವ ಆರ್ಥಿಕ ನಷ್ಟಕ್ಕೆ ಪರಿಹಾರವೇ ಇಲ್ಲವೇ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net