ಮಹಿಂದ್ರಾ ಥಾರ್​ ಮತ್ತು ಬಿಎಂಡಬ್ಲ್ಯೂ ಕಾರುಗಳ ನಡುವೆ ರೇಸ್​: ಬಲಿಯಾದ ವೃದ್ಧ

Mahindra
Published on

ತ್ರಿಶೂರ್​: ಮಹಿಂದ್ರಾ ಥಾರ್ ಮತ್ತು ಬಿಎಂಡಬ್ಲ್ಯೂ ಕಾರುಗಳ ನಡುವೆ ನಡೆದ ರೇಸ್​​ನಲ್ಲಿ ವ್ಯಕ್ತಿಯೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಅತಿ ವೇಗದ ಚಾಲನೆ ಮಾಡುತ್ತಿದ್ದ ಎರಡೂ ಕಾರುಗಳಲ್ಲಿ ಥಾರ್​ ಕಾರು ರಸ್ತೆ ಬದಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ.

ಕೇರಳದ ತ್ರಿಶೂರ್​ ಜಿಲ್ಲೆಯ ಕೊಟ್ಟೆಕ್ಕಾಡ್​ ಪ್ರದೇಶದಲ್ಲಿ ಮಹೀಂದ್ರಾ ಮತ್ತು ಬಿಎಂಡಬ್ಲ್ಯೂ ನಡುವೆ ರೇಸ್​​ ನಡೆದಿದೆ. ಈ ವೇಳೆ ಥಾರ್ ಕಾರು ಎಸ್​ಯುವಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ರವಿಶಂಖರ್ (67) ಎಂದು ಗುರುತಿಸಲಾಗಿದೆ. ಈತ ಗುರುವಾಯೂರಿನ ಮೂಲದವನೆಂದು ತಿಳಿದುಬಂದಿದೆ. ಥಾರ್ ಮತ್ತು ಬಿಎಂಡಬ್ಲ್ಯು ಚಾಲಕರನ್ನು ಪ್ರಸ್ತುತ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಚಾಲನೆ ವೇಳೆ ಇಬ್ಬರೂ ಚಾಲಕರು ಮದ್ಯ ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net