ಚಕ್ರದಡಿ ಸಿಲುಕಿದರೂ ಬದುಕಿದ, ಸಾವಿನ ಸನಿಹ ಹೋಗಿ ಬಂದ ಬೈಕ್​ ಸವಾರನ ಭೀಕರ ದೃಶ್ಯ ಇಲ್ಲಿದೆ

Helmet111
Published on

ಬೆಂಗಳೂರು: ಬಸ್​ ಚಕ್ರದಡಿ ಸಿಲುಕಿದ ಬೈಕ್​ ಸವಾರ ಈ ಭೀಕರ ವಿಡಿಯೋ ನೋಡುತ್ತಿದ್ದಂತೆ ಎಂತಹವರೂ ಬೆಚ್ಚಿ ಬೀಳುವುದಂತೂ ಸತ್ಯ. ಈ ಭೀಕರ ವಿಡಿಯೋವನ್ನು ಬೆಂಗಳೂರಿನ ಟ್ರಾಫಿಕ್​ ಪೊಲೀಸ್​ ಜಂಟಿ ಆಯುಕ್ತ ಡಾ.ಬಿಆರ್​ ರವಿಕಾಂತೇಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೈಕ್​ ಸವಾರ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸಿನ ಚಕ್ರದ ಕೆಳಗೆ ತಲೆ ಸಿಲುಕಿಕೊಳ್ಳುತ್ತದೆ. ಬಸ್ಸಿನ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸುತ್ತಾನೆ.ಆಗ ಚಕ್ರದಡಿಯಿಂದ ಬದುಕಿಬರುತ್ತಾನೆ.

ಈ ಭಯಾನಕ ವಿಡಿಯೋ ಹಂಚಿಕೊಂಡಿರುವ ಜಂಟಿ ಆಯುಕ್ತ ರವಿಕಾಂತೇಗೌಡ ಅವರು, ಬೈಕ್​ ಸವಾರರಿಗೆ ಸಲಹೆಯನ್ನೂ ನೀಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಐಎಸ್​ಐ ಮಾರ್ಕ್​ವುಳ್ಳ ಗುಣಮಟ್ಟದ ಹೆಲ್ಮೆಟ್​​ ಅನ್ನೇ ಧರಿಸಿ ಎಂದು ಸೂಚಿಸಿದ್ದಾರೆ.

ಉತ್ತಮ ಗುಣಮಟ್ಟದ ಹೆಲ್ಮೆಟ್​ ಧರಿಸಿದ್ದರಿಂದಲೇ ಈ ಯುವಕ ಬದುಕುಳಿದಿದ್ದಾನೆ. ಚಕ್ರದಡಿ ಸಿಲುಕಿದ್ದರೂ ಬದುಕುಳಿಯಲು ಈ ಹೆಲ್ಮೆಟ್​​ ಕಾರಣ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net