ನಾನು ಇಂದಿರಾ ಗಾಂಧಿಯವರ ಸೊಸೆ...ಯಾರಿಗೂ ಹೆದರಲ್ಲ ಎಂದಿದ್ದ ಸೋನಿಯಾ ಗಾಂಧಿಯವರ ಹಳೆ ವಿಡಿಯೋ ವೈರಲ್​!

Sonia-indira
Published on

ನವದೆಹಲಿ: ಸದ್ಯ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಸೋನಿಯಾ ಅವರ ಇಡಿ ವಿಚಾರಣೆಗೆ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದ್ದು, ಅಲ್ಲಲ್ಲಿ ಪ್ರತಿಭಟನೆ ಕೂಡ ಕೈಗೊಂಡಿದೆ. ಈ ನಡುವೆ ಯಾವುದಕ್ಕೂ ಹೆದರಲ್ಲ ಎಂದಿದ್ದ ಸೋನಿಯಾ ಅವರ ಈ ಹಿಂದಿನ ವಿಡಿಯೋವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ಇದೇ ವಿಡಿಯೋ ಈಗ ನೆಟ್ಟಿಗರ ಹಂಚಿಕೊಳ್ಳುವ ಮೂಲಕ ಯಾರಿಗೂ ಹೆದರದ ಕಾಂಗ್ರೆಸ್​​ ಇಂದು ಇಡಿ ಮುಂದೆ ತಲೆಬಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ತಮಿಳುನಾಡು ಭೇಟಿ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ವೇಳೆ ಸೋನಿಯಾ ಗಾಂಧಿ ಅವರು ನಾನು ಇಂದಿರಾಗಾಂಧಿ ಅವರ ಸೊಸೆ, ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ. ಈ ವೇಳೆ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಹಾಗೂ ಕಾಂಗ್ರೆಸ್​ ಮುಖಂಡ ವೇಣುಗೋಪಾಲ್​ ಕೂಡ ಈ ವಿಡಿಯೋದಲ್ಲಿ ಇದ್ದಾರೆ.

ಹಲವು ಬಾರಿ ವಿಚಾರಣೆಗೆ ಕರೆದಿದ್ದರೂ, ಗೈರಾಗಿದ್ದ ಸೋನಿಯಾ ಗಾಂಧಿ ಅವರು ಗುರುವಾರ ಇಡಿ ಮುಂದೆ ಹಾಜರಾಗಿದ್ದರು. ಇದೇ ಪ್ರಕರಣದಲ್ಲಿ ಹಲವು ಬಾರಿ ರಾಹುಲ್​ ಗಾಂಧಿ ಅವರ ವಿಚಾರಣೆ ಕೂಡ ನಡೆಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net