ಮಹಾರಾಷ್ಟ್ರ: ಜೆಎನ್.1 ಉಪ ತಳಿಯ 19 ಹೊಸ ಪ್ರಕರಣಗಳು ಪತ್ತೆ! ವರದಿ ಹೀಗಿದೆ

ವಿಜಯವಾಣಿ - 2023-12-31T210320.098
Published on

ಮಹಾರಾಷ್ಟ್ರ: ಭಾನುವಾರದಂದು ಮಹಾರಾಷ್ಟ್ರದಲ್ಲಿ 19 ಹೊಸ ಕೋವಿಡ್​ ರೂಪಾಂತರಿ ಜೆಎನ್​.1 ಪ್ರಕರಣಗಳು ವರದಿಯಾಗಿದ್ದು, ಅಧಿಕ ಸಂಖ್ಯೆಯ ಪ್ರಕರಣಗಳು ಪುಣೆಯಲ್ಲಿ ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಶನಿವಾರದವರೆಗೆ, ಮಹಾರಾಷ್ಟ್ರದ ಥಾಣೆ, ಪುಣೆ, ಅಕೋಲಾ, ಪುಣೆ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ವೈರಸ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಮಿಕ್ರಾನ್‌ನ ಜೆಎನ್.1 ಉಪ ತಳಿಯ 10 ಪ್ರಕರಣಗಳು ಕಂಡುಬಂದಿದ್ದವು. ಇದೀಗ 19 ಹೊಸ ಪ್ರಕರಣಗಳೊಂದಿಗೆ, ಹೊಸ ರೂಪಾಂತರದ ಒಟ್ಟು ಕೇಸ್​ ಸಂಖ್ಯೆ ರಾಜ್ಯದಲ್ಲಿ 29ಕ್ಕೆ ಏರಿದೆ.

ಜೆಎನ್​.1 ರೂಪಾಂತರದ ಮೊದಲ ಪ್ರಕರಣವು ಕೇರಳದ 79 ವರ್ಷದ ಮಹಿಳೆಯಲ್ಲಿ ಪತ್ತೆಯಾಯಿತು. ಈ ಮಧ್ಯೆ ಭಾರತವು ಕೇವಲ ಭಾನುವಾರದಂದು 841 ಹೊಸ ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಇದು ಕಳೆದ ಏಳು ತಿಂಗಳಲ್ಲಿ ಗರಿಷ್ಠ ದೈನಂದಿನ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net