More

    ಮಾಧ್ಯಮಗಳಿಗೆ ಡಿವೋರ್ಸ್ ಕೊಡೋಕೆ ಆಗಲ್ಲ, ಸಂಸಾರ ಮಾಡಲೇಬೇಕೆಂದ ಡಿಕೆಶಿ

    ಬೆಂಗಳೂರು: ಮಾಧ್ಯಮಗಳು ತಮ್ಮ ಘನತೆ, ಗೌರವವನ್ನು ಕಾಪಾಡಿಕೊಳ್ಳಬೇಕು. ಲೇಖನಿಯ ಅರಿತವೇನೆಂದು ತೋರಿಸುವ ಮೂಲಕ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ವಸ್ತುನಿಷ್ಠವಾಗಿ ವರದಿ ಮಾಡಬೇಕು ಹಾಗೂ ಮಾಧ್ಯಮಗಳು ಉದ್ದಿಮೆಗಳ ಕೈಗೊಂಬೆಯಾಗಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

    ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನ ನೀಡಿದ 2023ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

    ನನ್ನ 43 ವರ್ಷದ ರಾಜಕೀಯ ಜೀವನದಲ್ಲಿ ಎಲ್ಲೂ ಪ್ರಶಸ್ತಿ ಸ್ವೀಕರಿಸುವುದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಮಾಧ್ಯಮ ಸ್ನೇಹಿತರ ಪ್ರೀತಿ ಒಪ್ಪಿಕೊಳ್ಳುವಂತೆ ಮಾಡಿತು. ರಾಜಕಾರಣಿಗಳು ಮತ್ತು ಪತ್ರಕರ್ತರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಸಂಸಾರ ಮಾಡಲೇಬೇಕು. ಡಿವೋರ್ಸ್ (ವಿಚ್ಛೇದನ) ನೀಡಲು ಸಾಧ್ಯವಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts