ಈ ರಾಜ್ಯದಲ್ಲಿ ಜುಲೈ 31ರವರೆಗೆ ಲಾಕ್​ಡೌನ್​ ವಿಸ್ತರಣೆ

mumbai
Published on

ನವದೆಹಲಿ: ಎಷ್ಟೇ ಪ್ರಯತ್ನಿಸಿದರೂ ಕರೊನಾ ಸೋಂಕು ಪ್ರಸರಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಜುಲೈ 31ರವರೆಗೆ ಲಾಕ್​ಡೌನ್​ ಮುಂದುವರಿಸಲು ನಿರ್ಧರಿಸಿದೆ.

ಮಾಲ್​ಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್​ಗಳು, ಶಾಲೆ, ಕಾಲೇಜು, ಜಿಮ್​, ಈಜುಕೊಳಗಳು ಈ ಅವಧಿಯಲ್ಲಿ ಸಂಪೂರ್ಣ ಮುಚ್ಚಲ್ಪಟ್ಟಿರುತ್ತವೆ. ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಮಾತ್ರ ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿವೆ. ತುಂಬಾ ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ-ಮುಂಗಟ್ಟುಗಳಿಗೆ ಕೆಲವೊಂದು ನಿರ್ಬಂಧ ವಿಧಿಸಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕ್ರಮವಾಗಿ ಶೇ.15 ಮತ್ತು ಶೇ.10 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಅಂತರ್​ಜಿಲ್ಲಾ ವಾಹನ ಸಂಚಾರಕ್ಕೂ ಅವಕಾಶ ಇರಲಿದೆ.

ಮಹಾರಾಷ್ಟ್ರದಲ್ಲಿ ಇದುವರೆಗೂ 1.6 ಲಕ್ಷ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ಒಂದರಲ್ಲೇ ಗರಿಷ್ಠ 74 ಸಾವಿರ ಸೋಂಕಿತರು ಇದ್ದಾರೆ. ಇದು ಸೇರಿ ರಾಜ್ಯದ 10 ಪ್ರಮುಖ ನಗರಗಳು ಈಗಲೂ ರೆಡ್​ ಜೋನ್​ನಲ್ಲಿವೆ. 7 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net