More

    ಚೀನಾಕ್ಕೆ ಶಾಕ್‌ ಮೇಲೆ ಶಾಕ್‌! ಬಿಹಾರದ ಸೇತುವೆ ಟೆಂಡರ್‌ ರದ್ದು ಮಾಡಿದ ಕೇಂದ್ರ

    ಪಟ್ನಾ: ಭಾರತದ ವಿರುದ್ಧ ಸಂಘರ್ಷಕ್ಕೆ ಇಳಿದಿರುವ ಚೀನಾಗೆ ತಕ್ಕ ಪಾಠ ಕಲಿಸಲು ಇದಾಗಲೇ ಭಾರತ ಮುಂದಾಗಿದೆ. ಚೀನಾಕ್ಕೆ ನೀಡಲಾಗಿರುವ ಕೆಲವು ಗುತ್ತಿಗೆಗಳು ಇದಾಗಲೇ ರದ್ದಾಗಿವೆ. ಕಳೆದ ವಾರವಷ್ಟೇ ಮಹಾರಾಷ್ಟ್ರ ಸರ್ಕಾರ ಕೂಡ ತಾನು ಮಾಡಿಕೊಂಡಿರುವ ಐದು ಸಾವಿರ ಕೋಟಿ ರೂಪಾಯಿಯ ಮೂರು ಒಪ್ಪಂದಗಳಿಗೆ ಸದ್ಯ ಬ್ರೇಕ್​ ಹಾಗಿದೆ.

    ಇದರ ನಡುವೆಯೇ ಇದೀಗ ಬಿಹಾರದ ಗಂಗಾ ನದಿಗೆ ಕಟ್ಟಬೇಕಾಗಿದ್ದ ಸೇತುವೆ ಯೋಜನೆಯೂ ಸೇರ್ಪಡೆಯಾಗಿದೆ. 2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಇದು. ಚೀನಾದ ಎರಡು ಸಂಸ್ಥೆಗಳು ಇದರಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ. ತಾಂತ್ರಿಕ ಕಾರಣಗಳಿಂದ ಈ ಯೋಜನೆ ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

    ಇದನ್ನೂ ಓದಿ: ಚೀನಾದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೆ ಭಾರಿ ಇಕ್ಕಟ್ಟು

    5.6 ಕಿ.ಮೀ ಉದ್ದದ ಬ್ರಿಡ್ಜ್‌ನ ಯೋಜನೆಗಾಗಿ ಆಯ್ಕೆ ಮಾಡಲಾದ ನಾಲ್ಕು ಕಂಪನಿಗಳ ಪೈಕಿ ಎರಡು ಕಂಪನಿಗಳು ಮಾತ್ರ ಯೋಜನೆಗೆ ಒಪ್ಪಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣಗಳಿಂದ ಟೆಂಡರ್‌ ರದ್ದು ಮಾಡಲಾಗಿದೆ ಎಂದು ಬಿಹಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2019ರ ಡಿಸೆಂಬರ್ 16ರಂದು ಈ ಯೋಜನೆಯನ್ನು ಅಂತಿಮಗೊಳಿಸಿತ್ತು.

    ಚೀನಾದ ಅತಿಥಿಗಳಿಗೆ ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್‌ಗಳು ಮತ್ತು ಅತಿಥಿಗೃಹಗಳಲ್ಲಿ ವಸತಿ ನೀಡಲು ಅವಕಾಶ ನೀಡುವುದಿಲ್ಲ ಎಂದು ದೆಹಲಿಯ ಹೋಟೆಲ್ ಮತ್ತು ಅತಿಥಿ ಗೃಹ ಮಾಲೀಕರ ಸಂಘ ಘೋಷಿಸಿರುವ ಬೆನ್ನಲ್ಲೇ, ಕೀನ್ಯಾದಲ್ಲಿ 3.2 ಬಿಲಿಯನ್ ಡಾಲರ್ ಮೊತ್ತದ (ಸುಮಾರು 230 ಲಕ್ಷ ಸಾವಿರ ಕೋಟಿ ರೂಪಾಯಿ) ರೈಲು ಯೋಜನೆ ಕೈಗೊಂಡಿತ್ತು. ಅದಕ್ಕೆ ಬೇರೆ ಕಾರಣಗಳನ್ನು ನೀಡಿರುವ ಕೀನ್ಯಾ ಅದನ್ನು ರದ್ದು ಮಾಡಿರುವುದು ಇಲ್ಲಿ ಉಲ್ಲೇಖಾರ್ಹ. (ಏಜೆನ್ಸೀಸ್‌)

    ಮಾತೃಭಾಷೆ ಹಿಂದಿಯಲ್ಲೇ 8 ಲಕ್ಷ ಮಕ್ಕಳು ಫೇಲ್‌! ಇಂಗ್ಲಿಷ್‌ ಮೋಹ ಎಂದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts