ಅಪರಿಚಿತರಿಗೆ ಮೆಸೇಜ್​​ ಮಾಡಿದ್ದೇ ತಪ್ಪಾಯ್ತಾ..? ಮಗನಿಂದಲೇ ತಾಯಿಯ ಹತ್ಯೆ

kills2
Published on

ಮಹಾರಾಷ್ಟ್ರ: ತಾಯಿ ಯಾರಿಗೂ ಅಪರಿಚಿತರಿಗೆ ಮೆಸೇಜ್​​ ಮಾಡಿದ್ದಾಳೆ ಎಂದು ಮಗ ಕೊಡಲಿಯಿಂದ ಹೊಡೆದ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಟೌನ್‌ಶಿಪ್‌ನ ಪರೋಲ್ ಪ್ರದೇಶದಲ್ಲಿ ನಡೆದಿದೆ.


ಬಾಲಕ ಭಾನುವಾರ (ಆ.20) ರಾತ್ರಿ ಊಟ ಮಾಡುತ್ತಿದ್ದಾಗ ಆತನ ತಾಯಿ ಮೊಬೈಲ್‌ನಲ್ಲಿ ಯಾರಿಗೋ ಸಂದೇಶ ಕಳುಹಿಸುತ್ತಿರುವುದನ್ನು ಗಮನಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ, ಬಾಲಕ ಕೋಪಗೊಂಡು ತಾಯಿಗೆ ಕೊಡಲಿಯಲ್ಲಿ ಹೊಡೆದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಬಾಲಕನಿಗೆ ತನ್ನ ತಾಯಿ ಸೋನಾಲಿ ಗೊಗ್ರಾ (35) ನಡೆಯ ಬಗ್ಗೆ ಅನುಮಾನವಿತ್ತು ಮತ್ತು ಈ ವಿಚಾರವಾಗಿ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಮಾಂಡವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಕಾಂಬಳೆ ತಿಳಿಸಿದ್ದಾರೆ.


ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಭಿವಂಡಿಯ ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.


ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಆದರೆ ಇನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆಯ ವೇಳೆ ಕುಟುಂಬದ ಇತರ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net