ಮಹಾಲಿಂಗೇಶ್ವರಸ್ವಾಮಿ 7ನೇ ವರ್ಷದ ಆರಾಧನೆ

15-GPT-4
Published on

ಗುಂಡ್ಲುಪೇಟೆ: ತಾಲೂಕಿನ ರಂಗೂಪುರ ಗ್ರಾಮದಲ್ಲಿ ಶ್ರೀ ಮಹಾಲಿಂಗೇಶ್ವರ ಸ್ವಾಮಿಯವರ 7ನೇ ವರ್ಷದ ಆರಾಧನೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಮಕರ ಸಂಕ್ರಾಂತಿಯಂದು ನಸುಕಿನಲ್ಲಿ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಹೊರೆಯಾಲ, ಚನ್ನವಡೆಯನಪುರ, ದೊಡ್ಡಹುಂಡಿ, ಹಿರೀಕಾಟಿ ಹಾಗೂ ಅರೇಪುರ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ಪೂಜಾಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ದೇವಾಲಯದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net