ಮಹಾಭಾರತದಲ್ಲಿದೆ ಗುರು-ಶಿಷ್ಯ ಪರಂಪರೆ ವರ್ಣನೆ

nrp rotary
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಗುರು ಪೂರ್ಣಿಮೆಯಲ್ಲಿ ವಿ.ಎಸ್.ಕೃಷ್ಣಭಟ್ ಅವರನ್ನು ಸನ್ಮಾನಿಸಲಾಯಿತು. ಎನ್.ಕೆ.ಕಿರಣ್, ವಿದ್ಯಾನಂದ್, ವಿಜಯಕುಮಾರ್, ಎಸ್.ಎಸ್.ಜಗದೀಶ್, ಜಿ.ದಿವಾಕರ ಇದ್ದರು.
Published on

ಎನ್.ಆರ್.ಪುರ: ಗುರು-ಶಿಷ್ಯ ಪರಂಪರೆ, ಸಂಬಂಧದ ಬಗ್ಗೆ ಮಹಾಭಾರತದಲ್ಲಿ ಚೆನ್ನಾಗಿ ವರ್ಣನೆ ಮಾಡಲಾಗಿದೆ ಎಂದು ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್ ತಿಳಿಸಿದರು.
ಭಾನುವಾರ ಅಗ್ರಹಾರದಲ್ಲಿ ರೋಟರಿ ಸಂಸ್ಥೆ ಗುರು ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ, ತಾಯಿ ಮಕ್ಕಳಿಗೆ ಜನ್ಮ ನೀಡಿದರೆ ಗುರುವಾದವರು ಶಿಷ್ಯರಿಗೆ ಜ್ಞಾನ ಬೋಧಿಸುತ್ತಾರೆ. ವ್ಯಾಸರು ಹುಟ್ಟಿದ ದಿನದಂದು ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಶಿಕ್ಷಣ ವೃತ್ತಿಯಲ್ಲಿ ನನಗೆ ಆತ್ಮತೃಪ್ತಿ ಸಿಕ್ಕಿದೆ ಎಂದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ವಿದ್ಯಾ ನಂದಕುಮಾರ್ ಮಾತನಾಡಿ, ವಿ.ಎಸ್.ಕೃಷ್ಣಭಟ್ಟರು 1956ರಿಂದ 1963ರವರೆಗೆ ಶೃಂಗೇರಿ ಮಠದಲ್ಲಿ ತರ್ಕಶಾಸ್ತ್ರ, ಜ್ಯೋತಿಷ್ಯ, ಋಗ್ವೇದ, 1963ರಿಂದ 1968ರವರೆಗೆ ಬೆಂಗಳೂರಿನ ಶ್ರೀ ಶಂಕರ ಮಠದಲ್ಲಿ ಅದ್ವೈತ ವೇದಾಂತ ವಿದ್ವಾನ್ ಪದವಿ ಪಡೆದಿದ್ದರು. 1967ರಿಂದ ಹಳಕನ್ನಡ, ನಡುಗನ್ನಡ, ಹೊಸ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ವ್ಯಾಕರಣ ಶಾಸ್ತ್ರ ಅಭ್ಯಾಸ ಮಾಡಿದ್ದು ಕರ್ನಾಟಕ ಸರ್ಕಾರದಿಂದ ಕನ್ನಡ ಪಂಡಿತ ಪದವಿ ಸಿಕ್ಕಿದೆ. ಅಲ್ಲದೆ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ವಿ.ಎಸ್.ಕೃಷ್ಣಭಟ್ಟರಿಗೆ ಪಾದ ಪೂಜೆ ನೆರವೇರಿಸಿ, ಆರತಿ ಬೆಳಗಿ ಸನ್ಮಾನ ಮಾಡಲಾಯಿತು. ವಕೀಲ ಜಿ.ದಿವಾಕರ್, ಕಟ್ಟಿನಮನೆ ಶಾಲೆ ಶಿಕ್ಷಕ ಬಿ.ಟಿ.ವಿಜಯಕುಮಾರ್, ನಿವೃತ್ತ ಶಿಕ್ಷಕ ಟಿ.ಎಂ.ಶಿವಕುಮಾರ್, ರೋಟರಿ ಅಧ್ಯಕ್ಷ ಎನ್.ಕೆ.ಕಿರಣ್, ನಿಯೋಜಿತ ಅಧ್ಯಕ್ಷ ಜಿ.ಆರ್.ದಿವಾಕರ್, ಸದಸ್ಯರಾದ ಕೆ.ಎಸ್.ರಾಜಕುಮಾರ್, ಎಂ.ಆರ್.ಸುಂದರೇಶ್, ಎಸ್.ಎಸ್.ಜಗದೀಶ್, ಅಭಿಷೇಕ್, ಕುಮಾರಶೆಟ್ಟಿ, ಗಿರೀಶ್ ಶೇಟ್, ರಜಿತ್, ಶಶಾಂಕ್, ಪವಿತ್ರಾ ತಾರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net