ಸಲಿಂಗಕಾಮ: ಗಂಡನಿಗೆ ಕೈಕೊಟ್ಟು ನಾದಿನಿ ಜತೆ ಪತ್ನಿ ಪರಾರಿ, ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಮಹಾ ರಹಸ್ಯ ಬಯಲು! Woman Elopes

Woman Elopes
Published on

Woman Elopes : ಮಹಿಳೆಯೊಬ್ಬರು ತನ್ನ ಗಂಡನ ಸೋದರಸಂಬಂಧಿ ಮಹಿಳೆಯ ಜೊತೆ ಓಡಿಹೋಗಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಅಮರಪಠಾಣ್ ಮೂಲದ ಅಶುತೋಷ್ ಎಂಬವರು ತಮ್ಮ ಪತ್ನಿ ಸಂಧ್ಯಾ ತಮ್ಮ ನಾದಿನಿ ಮಾನ್ಸಿಯೊಂದಿಗೆ ಓಡಿಹೋಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಅನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು ಇಬ್ಬರು ಮಹಿಳೆಯರಿಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಅಶುತೋಷ್ ಮತ್ತು ಸಂಧ್ಯಾ ಏಳು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಐದು ವರ್ಷದ ಮಗನಿದ್ದಾನೆ. ದಂಪತಿ ಜಬಲ್ಪುರದ ಮನೆಯಲ್ಲಿ ವಾಸಿಸುತ್ತಿದ್ದರು. ಅಶುತೋಷ್ ಅವರ ಸೋದರಸಂಬಂಧಿ ಮಾನ್ಸಿ, ಆಗಾಗ ಅವರ ಮನೆಗೆ ಭೇಟಿ ಮಾಡುತ್ತಿದ್ದರು. ಸಂಧ್ಯಾ ಮತ್ತು ಮಾನ್ಸಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದು, ನಿಯಮಿತವಾಗಿ ಮಾರುಕಟ್ಟೆಗೆ ಒಟ್ಟಿಗೆ ಹೋಗುತ್ತಿದ್ದರು ಎಂದು ಅಶುತೋಷ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಹೀಗಿರುವಾಗ ಆಗಸ್ಟ್ 12 ರಂದು ಸಂಧ್ಯಾ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದಾಗ ಆಕೆ ಜಬಲ್ಪುರದ ರೈಲು ನಿಲ್ದಾಣದಲ್ಲಿ ಪತ್ತೆಯಾದಳು. ಈ ವೇಳೆ ಆಕೆಯನ್ನು ಮನೆಗೆ ಕರೆತರಲಾಯಿತು. ಆದರೆ, ಆಗಸ್ಟ್ 22ರಂದು ಸಂಧ್ಯಾ ಮತ್ತೆ ನಾಪತ್ತೆಯಾಗಿದ್ದಾಳೆ. ಈ ಬಾರಿ ಸಂಧ್ಯಾ ತನ್ನ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಆಕೆಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇದಾದ ಬಳಿಕ ಸಂಧ್ಯಾಳ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ, ಆಕೆ ಮಾನ್ಸಿಯನ್ನು ಪ್ರೀತಿಸುತ್ತಿರುವುದು ಪತ್ತೆಯಾಗಿದೆ. ಫೋನ್‌ನಲ್ಲಿನ ಚಾಟ್‌ಗಳಿಂದ ಇಬ್ಬರೂ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸಂಧ್ಯಾ ಆಗಲಿ ಅಥವಾ ಮಾನ್ಸಿಯಾಗಲಿ ಮೊಬೈಲ್ ಫೋನ್ ಬಳಸದಿರುವುದು ತನಿಖೆಗೆ ಒಂದು ಸವಾಲಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ಮುಂದುವರೆದಿದೆ ಎಂದು ಜಬಲ್ಪುರದ ಎಎಸ್‌ಪಿ ಸೂರ್ಯಕಾಂತ್ ಶರ್ಮಾ ತಿಳಿಸಿದ್ದಾರೆ.

ಅಂದಹಾಗೆ, ಸಂಧ್ಯಾ ಮತ್ತು ಆಕೆಯ ನಾದಿನಿ ಮಾನ್ಸಿ ನಡುವಿನ ಸಲಿಂಗಕಾಮ ಸಂಬಂಧದ ಬಹಿರಂಗವು ಸ್ಥಳೀಯವಾಗಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಈ ಘಟನೆಯ ಬಗ್ಗೆ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net