ಬ್ರಾಹ್ಮಣರು ಕನಿಷ್ಟ 4 ಮಕ್ಕಳಿಗೆ ಜನ್ಮ ನೀಡಿ; ಅವರಿಗೆ ₹ 1 ಲಕ್ಷ ಬಹುಮಾನ ನೀಡುವುದಾಗಿ ಸಚಿವರ ಘೋಷಣೆ | Pandit Vishnu Rajoria

Untitled design - 2025-01-13T170407.057
Published on

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂದೋರ್‌ನಲ್ಲಿ ಆಯೋಜಿಸಲಾದ ಸಾಮಾಜಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತ್ ವಿಷ್ಣು ರಾಜೋರಿಯಾ(Pandit Vishnu Rajoria) ಅವರು ಬ್ರಾಹ್ಮಣ ಸಮುದಾಯದ ನವವಿವಾಹಿತ ದಂಪತಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಮಧ್ಯಪ್ರದೇಶದ ಪರಶುರಾಮ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿರುವ ಅವರು, ಸನಾತನ ಧರ್ಮದ ರಕ್ಷಣೆಗೆ ಯುವಕರು ಮುಂದಾಗಬೇಕಿದೆ. ನಮ್ಮ ಪೂರ್ವಜರು ಧರ್ಮ ರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಈಗ ಅವರ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜ ಮತ್ತು ಧರ್ಮದ ಏಳಿಗೆಗೆ ಈ ಹೆಜ್ಜೆ ಅಗತ್ಯ ಎಂದು ಹೇಳಿದರು. ಮೋಹನ್ ಸರ್ಕಾರದಲ್ಲಿ ಪಂಡಿತ್ ವಿಷ್ಣು ರಾಜೋರಿಯಾ ಅವರಿಗೆ ರಾಜ್ಯ ಸಚಿವ ಸ್ಥಾನಮಾನವಿದೆ.

ಅಲ್ಲಿ ನೆರದಿದ್ದವರು 1 ಲಕ್ಷ ರೂಪಾಯಿಯಲ್ಲಿ ನಾಲ್ಕು ಮಕ್ಕಳನ್ನು ಹೇಗೆ ಪೋಷಿಸಲು ಸಾಧ್ಯ ಎಂದು ರಾಜೋರಿಯಾ ಅವರನ್ನು ಕೇಳಿದಾಗ, ಮಕ್ಕಳನ್ನು ಬೆಳೆಸುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ಅಲ್ಲದೆ ಪರಶುರಾಮ ಕಲ್ಯಾಣ ಮಂಡಳಿಯಿಂದ ಸಹಾಯಧನ ನೀಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.

ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ಸಚಿವ ರಾಜೋರಿಯಾ ಅವರು, ನೀವು ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ ನಿಮಗೂ ಬಹುಮಾನ ಸಿಗುತ್ತದೆ. ಇದು ಸಮಾಜ ಮತ್ತು ಧರ್ಮದ ಹಿತಾಸಕ್ತಿ. ನಮ್ಮ ರಾಷ್ಟ್ರ, ಸಮಾಜ ಮತ್ತು ಧರ್ಮವನ್ನು ರಕ್ಷಿಸಲು ನಾವು ಈ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net