ಪ್ರೇಮ ವೈಫಲ್ಯ; ಗುಂಡಿಕ್ಕಿ ಪ್ರೇಯಸಿಯ ತಂದೆಯನ್ನು ಹತ್ಯೆಗೈದ ಪೊಲೀಸ್​

Crime
Published on

ಇಂದೋರ್​: ಪೊಲೀಸ್​ ಪೇದೆಯೊಬ್ಬರು ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಂದೆಯನ್ನು ಗುಂಡಿಕ್ಕಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ.

ಸೋಮವಾರ ಮಧ್ಯರಾತ್ರಿ 1:00 ಘಂಟೆ ಸುಮಾರಿಗೆ ಘಟನೆ ನಡೆದಿದ್ದು ಕೊಲೆಗೈದ ನಂತರ ಪೇದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ಧಾರೆ.

ಪ್ರೇಮ ವೈಫಲ್ಯ

ಮೃತ ಪೊಲೀಸ್​ ಪೇದೆಯನ್ನು ಸುಭಾಷ್​ ಕರಾಡಿ ಎಂದು ಗುರುತಿಸಲಾಗಿದ್ದು ಮಾಲಿಕೇಡಿ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ತೆರಳಿದ್ದಾನೆ. ಈ ವೇಳೆ ಏಕಾಏಕಿ ಅವರ ಮೇಲೆ ಬಂದೂಕಿನಿಂದ ಅಲ್ಲಿದ್ದವರ ಮೇಲೆ ದಾಳಿ ಮಾಡಿದ್ದಾನೆ.

ಗುಂಡೇಟಿನಿಂದ ಯುವತಿಗೆ ಗಂಭೀರ ಗಾಯಗಳಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ರಕ್ತಸ್ರಾವದಿಂದ ಆಕೆಯ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಆರೋಪಿ ಪೇದೆ ಹತ್ತಿರದಲ್ಲಿದ್ದ ರೈಲ್ವೆ ಹಳಿ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net