

ಕೊಚ್ಚಿ: ಕೇರಳದಲ್ಲಿ ಯಹೂದಿ ಸಮುದಾಯದ ಜೋಡಿಯೊಂದು 15 ವರ್ಷಗಳ ನಂತರ ಮೊದಲ ಬಾರಿಗೆ ವಿವಾಹವಾಗಿದ್ದಾರೆ. ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. 15 ವರ್ಷಗಳ ನಂತರ ನಡೆದ ಮೊದಲ ಯಹೂದಿ ಮದುವೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು, ಕೊನೆಯ ವಿವಾಹವು 2008ರಲ್ಲಿ ನೆರವೇರಿತ್ತು.
ಅಮೆರಿಕದಲ್ಲಿ ದತ್ತಾಂಶ ವಿಜ್ಞಾನಿಯಾಗಿರುವ ರಾಚೆಲ್ ಮಲಾಖೈ ಮತ್ತು ನಾಸಾ ಎಂಜಿನಿಯರ್ ರಿಚರ್ಡ್ ಜಕಾರಿ ರೋವ್ ಎಂಬುವರನ್ನು ವಿವಾಹವಾಗಿದ್ದು, ಇಸ್ರೇಲ್‌ನಿಂದ ಆಗಮಿಸಿದ ರಬ್ಬಿ(ಪೂಜಾರಿ)ಯೊಬ್ಬರು ಈ ಮದುವೆ ನೆರವೇರಿಸಿದ್ದು ವಿಶೇಷವಾಗಿತ್ತು.
ಮದುವೆಯಲ್ಲಿ ಕೇವಲ ತಮ್ಮ ಸಮುದಾಯದವರು ಮಾತ್ರ ಭಾಗವಹಿಸುವುದು ವಾಡಿಕೆಯಾಗಿತ್ತು. ತಮ್ಮ ಆಚರಣೆ ಸಂಪ್ರದಾಯ ತಿಳಿಯುವ ಉದ್ದೇಶದಿಂದ ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. (ಏಜೆನ್ಸೀಸ್)