More

    2000 ರೂ. ನೋಟುಗಳು ಬ್ಯಾನ್​ ಆಗಿಲ್ಲ, ಈ ನೋಟುಗಳನ್ನು ಅಂಗಡಿಯವರು ನಿರಾಕರಿಸುವಂತಿಲ್ಲ: ಆರ್​​ಬಿಐ ಗವರ್ನರ್

    ದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು ಹಿಂಪಡೆದಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ 2000 ರೂ.ನೋಟು ಕಾನೂನುಬದ್ಧವಾಗಿ ಮುಂದುವರೆಯಲಿವೆ. ಈ ನೋಟುಗಳನ್ನು ಅಂಗಡಿವರು ನಿರಾಕರಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

    ಇದನ್ನೂ ಓದಿ: ಇಂಡಿಕೇಟರ್ ಸರಿಯಾಗಿ ಹಾಕು ಎಂದಿದ್ದೇ ತಪ್ಪಾಯ್ತು! ಚಾಕು ಇರಿದು ಯುವಕನ ಹತ್ಯೆ

    ಜನರು ಆತುರದಿಂದ ಬ್ಯಾಂಕ್‌ಗಳಿಗೆ ಧಾವಿಸಬೇಕಿಲ್ಲ. ನಿಮ್ಮ ಬಳಿಯಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶವಿದೆ. ನಾವು 2000ರೂ.ನೋಟುಗಳನ್ನು ಚಲಾವಣೆಯಿಂದ ತೆಗೆದುಕೊಳ್ಳುತ್ತಿದ್ದೇವೆ ಆದರೆ ಅವುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಈ ಹಿಂದೆ ಕೇಂದ್ರೀಯ ಬ್ಯಾಂಕ್ ನಿರ್ದೇಶಿಸಿದಂತೆ ಈ ನೋಟುಗಳನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    2000 ಮುಖಬೆಲೆಯ ನೋಟುಗಳನ್ನು ಹೊಂದಿರುವರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಅಥವಾ ಮೇ 23ರಿಂದ ಸೆಪ್ಟೆಂಬರ್ 30ರವರೆಗೆ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ.

    ಅಲ್ಲದೇ, ಕೌಂಟರ್​ಗಳಲ್ಲಿ 2000 ನೋಟುಗಳ ವಿನಿಮಯಕ್ಕಾಗಿ ಸೌಲಭ್ಯವನ್ನು ಒದಗಿಸಬೇಕು. ಬೇಸಿಗೆ ಕಾಲವಿರುವುದರಿಂದ ಸಾರ್ವಜನಿಕರಿಗೆ ಕೂರಲು ಸ್ಥಳ, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿಗಳಂತಹ ಸೂಕ್ತ ಮೂಲಸೌಕರ್ಯಗಳನ್ನು ಶಾಖೆಗಳಲ್ಲಿ ಒದಗಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. 2000 ರೂ.ನೋಟುಗಳ ಠೇವಣಿ ಮತ್ತು ವಿನಿಮಯದ ದೈನಂದಿನ ಡೇಟಾವನ್ನು ಬ್ಯಾಂಕ್‌ಗಳು ನಿರ್ವಹಿಸಬೇಕು ಎಂದು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts