ಪ್ರಭಾಸ್​ ನಟನೆಯ 'ಸಲಾರ್'​ ದಿನವೇ ಈ ಚಿತ್ರವೂ ರಿಲೀಸ್​; ಬಾಕ್ಸ್​ ಆಫೀಸ್​ನಲ್ಲಿ ಎದುರಾಗಲಿದೆ ಪೈಪೋಟಿ?

Untitled design - 2023-09-01T173350.431
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್. ರಾಧಾಕೃಷ್ಣ ಅವರ ಪುತ್ರಿ ಹರಿಕಾ ಸೂರ್ಯದೇವರ, ಯೂತ್​ ಡ್ರಾಮಾ ಆಧರಿತ 'ಮ್ಯಾಡ್' ಚಿತ್ರದ ಮುಖೇನ ಇದೀಗ ನಿರ್ಮಾಪಕಿಯಾಗಿ ಹೊರಹೊಮ್ಮಲಿದ್ದಾರೆ. ಸದ್ಯ ಈ ಚಿತ್ರವು 'ಸಲಾರ್'​ ಬಿಡುಗಡೆ ದಿನದಂದೇ ರಿಲೀಸ್​ ಆಗಲಿದೆ ಎಂಬ ಸುದ್ದಿ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕಲ್ಯಾಣ್​ ಶಂಕರ್​ ನಿರ್ದೇಶನದಲ್ಲಿ ಮೂಡಿಬರಲಿರುವ 'ಮ್ಯಾಡ್'​ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಇದೀಗ ಟೀಸರ್ ಅನ್ನು ಕೂಡ ಅಧಿಕೃತವಾಗಿ ಗುರುವಾರ (ಆಗಸ್ಟ್​ 31) ಬಿಡುಗಡೆಗೊಳಿಸಿದೆ. ಟೀಸರ್​ ವೀಕ್ಷಿಸಿದ ಪ್ರೇಕ್ಷಕರು, ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಹೊಂಬಾಳೆ ಫಿಲಂಸ್​ ಬ್ಯಾನರ್​​ನಡಿ ನಿರ್ಮಾಣವಾಗಿರುವ ನಟ ಪ್ರಭಾಸ್​ ಮತ್ತು ನಿರ್ದೇಶಕ ಪ್ರಶಾಂತ್ ನೀಲ್​ ಕಾಂಬಿನೇಷ್​ನಲ್ಲಿ ತೆರೆ ಮೇಲೆ ಅಪ್ಪಳಿಸಲಿರುವ 'ಸಲಾರ್'​ಗೆ ಟಕ್ಕರ್ ನೀಡಲು 'ಮ್ಯಾಡ್'​ ಸಜ್ಜಾಗಿದೆ. ಸದ್ಯ ಈ ಎರಡು ಚಿತ್ರಗಳು ಒಂದೇ ದಿನದಂದು ರಿಲೀಸ್​ ಆಗುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಎದುರಾಗಬಹುದು ಎಂದು ಊಹಿಸಲಾಗಿದೆ.

'ಮ್ಯಾಡ್'​ ಚಿತ್ರದಲ್ಲಿ ನಾರ್ನೆ ನಿತಿನ್, ಸಂಗೀತ್ ಶೋಭಾನ್, ರಾಮ್ ನಿತಿನ್, ಶ್ರೀ ಗೌರಿ ಪ್ರಿಯಾ ರೆಡ್ಡಿ, ಅನಾನಾತಿಕ ಸನಿಲ್‌ಕುಮಾರ್, ಗೋಪಿಕಾ ಉದ್ಯಾನ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net