ಪತ್ರಕರ್ತ ಮತ್ತು ಸ್ನೇಹಿತನ ಸಜೀವ ದಹನ; ಮನೆಯೊಳಗೆ ಕೂಡಿ ಹಾಕಿ ಕೊಂದ ಪಾಪಿಗಳು

journalist
Published on

ಲಖನೌ: ಸ್ನೇಹಿತನೊಂದಿಗಿದ್ದ ಪತ್ರಕರ್ತನನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ನೇಹಿತರ ಪ್ರಾಣ ಬಿಟ್ಟಿದ್ದಾರೆ.

ಹಿಂದಿ ದಿನಪತ್ರಿಕೆಯ ಪತ್ರಕರ್ತ ರಾಕೇಶ್​ ಸಿಂಗ್​ ಮತ್ತು ಆತನ ಸ್ನೇಹಿತ ಪಿಂಟು ಸಾಹು ಕಲ್ವರಿ ಗ್ರಾಮದಲ್ಲಿದ್ದ ರಾಕೇಶ್​ನ ಮನೆಯಲ್ಲಿದ್ದರು. ಮನೆಯೊಳಗಿದ್ದ ಅವರನ್ನು ಹೊರಗಿನಿಂದ ಕೂಡಿ ಹಾಕಿ ಬೆಂಕಿ ಹಾಕಲಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ಬಲರಾಂಪುರ್ ಎಸ್​.ಪಿ ದೇವ್ ರಂಜನ್ ವರ್ಮಾ, 'ಮೃತರು ತಮ್ಮ ಕೆಲವು ಪರಿಚಯಸ್ಥರೊಂದಿಗೆ ಕುಳಿತಿರಬಹುದು ಮತ್ತು ಅವರ ನಡುವೆ ವಾದ ವಿವಾದ ಸಂಭವಿಸಿರಬಹುದು' ಎಂದು ಹೇಳಿದರು. ಅದೇ ಜಗಳದ ಕಾರಣದಿಂದಾಗಿ ಅವರಲ್ಲಿ ಯಾರಾದರೂ ಒಬ್ಬರು ಬೆಂಕಿಯನ್ನು ಹೊತ್ತಿಸಿ ಸ್ಥಳದಿಂದ ಪರಾರಿಯಾಗಿರಬಹುದು ಎಂದು ಅವರು ಹೇಳಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡವೂ ಈ ಸ್ಥಳಕ್ಕೆ ಭೇಟಿ ನೀಡಿದೆ. ಶೀಘ್ರದಲ್ಲೇ ಕೆಲವು ಮುಖ್ಯ ತನಿಖಾಂಶಗಳು ಹೊರಬೀಳಲಿದೆ ಎಂದು ವರ್ಮಾ ಹೇಳಿದ್ದಾರೆ.

ಮೃತ ವ್ಯಕ್ತಿಯ ಪತ್ನಿ ಮಕ್ಕಳೊಂದಿಗೆ ಪೋಷಕರ ಮನೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net