ಬ್ಯಾಕ್ ಟು ಬ್ಯಾಕ್ ಫ್ಲಾಪ್​ ಕಂಡರೂ ತಪ್ಪಲಿಲ್ಲ ಅವಕಾಶ​! 'ಲಕ್ಕಿ' ನಟಿಯನ್ನೇ ಅರಸಿ ಬರುತ್ತಿವೆ ಸಾಲು ಸಾಲು ಚಿತ್ರಗಳ ಆಫರ್​ | Lucky Heroine

ವಿಜಯವಾಣಿ (13)
Published on

Lucky Heroine: ಸಾಮಾನ್ಯವಾಗಿ ಯಾವುದೇ ಚಿತ್ರರಂಗದಲ್ಲಿ ನಟ ಅಥವಾ ನಟಿಯರು ಯಾರೇ ಇರಲಿ, ತಾವು ಪ್ರಮುಖ ಪಾತ್ರದಲ್ಲಿ ಅಭಿನಯದ ಸಿನಿಮಾಗಳು ಸೋಲು ಕಂಡರೆ ಅಲ್ಲಿಗೆ ಅವರ ಪಾಲಾಗಬೇಕಿದ್ದ ಅವಕಾಶಗಳು ಕೊನೆಗೊಳ್ಳುತ್ತವೆ. ಒಂದು ಚಿತ್ರ ಬಾಕ್ಸ್ ಆಫೀಸ್​ ಮತ್ತು ಜನರಿಂದ ಒಳ್ಳೆಯ ವಿಮರ್ಶೆಗಳನ್ನು ಪಡೆಯುವಲ್ಲಿ ಹೀನಾಯವಾಗಿ ಸೋತರೆ, ಅಲ್ಲಿಂದ ಆ ಕಲಾವಿದರಿಗೆ ಮುಂಬರುವ ಚಿತ್ರಗಳ ಆಫರ್​​ಗಳು ಕೈತಪ್ಪಲು ಶುರುವಾಗುತ್ತದೆ. ಆದರೆ, ಈ ಸ್ಟಾರ್​ ನಟಿಗೆ ಮಾತ್ರ ಒಂದರ ಮೇಲೊಂದು ಅವಕಾಶಗಳು ಹುಡುಕಿಕೊಂಡು ಬರುತ್ತಿರುವುದು ಸದ್ಯ ಅನೇಕರಲ್ಲಿ ಆಶ್ಚರ್ಯ ತಂದಿದೆ.

ಆಫರ್​ಗಳ ಸಂಖ್ಯೆಯಲ್ಲಿ ಇಲ್ಲ ಕುಸಿತ

ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದಿನದಿಂದಲೂ ಸಾಕಷ್ಟು ಫ್ಲಾಪ್​ ನೋಡಿರುವ ಟ್ರೆಂಡಿಂಗ್ ನಟಿ ಮೀನಾಕ್ಷಿ ಚೌಧರಿ, 'ಇಚ್ಚ ವಾಹನಮುಲು ತುಳಾರಡು' ಎಂಬ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಬಳಿಕ ಈ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಸೋಲನ್ನು ಕಂಡಿದ್ದಾರೆ. ಇಷ್ಟಿದ್ದರೂ ಸಹ ನಟಿಯನ್ನು ಅರಸಿ ಬರುತ್ತಿರುವ ಆಫರ್​ಗಳ ಸಂಖ್ಯೆ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬುದು ಸದ್ಯ ಗಮನಾರ್ಹ. ಇತ್ತೀಚೆಗಷ್ಟೇ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಬಾಸ್ಕರ್​ ಚಿತ್ರದಲ್ಲಿ ದುಲ್ಕರ್​ ಹೆಂಡತಿ ಪಾತ್ರದಲ್ಲಿ ಮಿಂಚಿದ ಮೀನಾಕ್ಷಿ ಅಭಿನಯಕ್ಕೆ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಹರಿದುಬಂದಿತು.

ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು

ಈ ವರ್ಷ ಆರು ಪ್ರಮುಖ ಚಿತ್ರಗಳಲ್ಲಿ ನಟಿಸಿರುವ ಮೀನಾಕ್ಷಿ ಚೌಧರಿ, 'ಲಕ್ಕಿ ಭಾಸ್ಕರ್' ಹೊರತುಪಡಿಸಿ ಉಳಿದೆಲ್ಲಾ ಸಿನಿಮಾಗಳಲ್ಲಿ ಸೋಲನ್ನು ಕಂಡಿದ್ದಾರೆ. ಐದು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿಸಿದ ಗಳಿಕೆ ಕಾಣದೆ, ತೆರೆಕಂಡ ಕೆಲವೇ ವಾರಗಳಲ್ಲಿ ಚಿತ್ರಮಂದಿರಗಳಿಂದ ಹೊರಗುಳಿಯಿತು. ಮೀನಾಕ್ಷಿ ನಟಿಸಿದ 'ಮಟ್ಕಾ' ಮತ್ತು 'ಮೆಕ್ಯಾನಿಕ್ ರಾಕಿ' ಚಿತ್ರಗಳು ಕೂಡ ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿತು. ಇಲ್ಲಿಗೆ ನಟಿಯ ಸಿನಿಪಯಣ ಮುಗಿಯಬಹುದು ಎಂದೇ ಅನೇಕರು ಭಾವಿಸಿದ್ದರು. ಆದರೆ, ಇದೇ ನಟಿಗೆ ಅದೃಷ್ಟವಾಗಿದ್ದು, ಅವಕಾಶಗಳು ಹೆಚ್ಚಾಗಿದೆ.

ಲಕ್ಕಿ ಹೀರೋಯಿನ್​

'ಲಕ್ಕಿ ಬಾಸ್ಕರ್'​ ಚಿತ್ರದಿಂದ ಅಪಾರ ಪ್ರಶಂಸೆ, ಮನ್ನಣೆ ಪಡೆದಿರುವ ಮೀನಾಕ್ಷಿ ಚೌಧರಿ, ಸದ್ಯ ಟಾಲಿವುಡ್​ನ ಲಕ್ಕಿ ಹೀರೋಯಿನ್ ಆಗಿ ಹೊರಹೊಮ್ಮಿದ್ದಾರೆ. ನಟಿ ಅಭಿನಯದ ಹಲವಾರು ಸಿನಿಮಾಗಳು 2025ರಲ್ಲಿ ತೆರೆಕಾಣಲು ಸಜ್ಜಾಗಿದ್ದು, ಈ ಪೈಕಿ 'ಸಂಕ್ರಾಂತಿಕಿ ಯಾಳ್ನಾಂ' ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಸಂಕ್ರಾಂತಿ ಹಬ್ಬದಂದೇ ಸಿನಿಮಾ ತೆರೆ ಕಾಣಲಿದೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಇದರೊಟ್ಟಿಗೆ ಮತ್ತೆರೆಡು ಚಿತ್ರಗಳಲ್ಲಿ ಮೀನಾಕ್ಷಿ ನಾಯಕಿಯಾಗಿ ಆಯ್ಕೆಯಾಗಿದ್ದು, ಒಟ್ಟಾರೆ ಮುಂದಿನ ವರ್ಷ ಮೂರ್ನಾಲ್ಕು ಚಿತ್ರಗಳೊಂದಿಗೆ ತೆರೆ ಮೇಲೆ ಮಿಂಚಲು ಎದುರುನೋಡುತ್ತಿದ್ದಾರೆ ಎಂಬುದು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net