VIDEO | ಬೈಕ್ ಸೀಝ್ ಮಾಡಿದ ನಗರ ಪಾಲಿಕೆ​ ಮಂದಿ; ಸಿಟ್ಟಿನಲ್ಲಿ ಶರ್ಟ್​ ಕಳಚಿ ಪ್ರತಿಭಟಿಸಿದ ವ್ಯಕ್ತಿ!​

7895
Published on

ಉತ್ತರ ಪ್ರದೇಶ: ನಗರ ಪಾಲಿಕೆ ಸಿಬ್ಬಂದಿಗಳು ಗಲ್ಲಿಯೊಂದರಲ್ಲಿ ನಿಲ್ಲಿಸಿದ್ದ ಬೈಕ್​ನ್ನು ಜಪ್ತಿ ಮಾಡಿದ್ದಾರೆ. ದಂಡ ಪಾವತಿಸಿದರೆ ವಾಹನವನ್ನು ಮಾತ್ರ ಬೈಕ್​ನ್ನು ಬಿಟ್ಟು ಕಳುಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಒಪ್ಪದ ಬೈಕ್ ಮಾಲೀಕ ಶರ್ಟ್​ ಕಳಚಿ, ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಘಟನೆ ಲಕ್ನೋದಲ್ಲಿ ನಡೆದಿದೆ.

ಶರ್ಟ್​ ಕಳಚಿ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿಭಟನೆ ನಡೆಸುವ ವೇಳೆ ನಗರ ಪಾಲಿಕೆ ಅಧಿಕಾರಿಗಳು ಗಲ್ಲಿಯಲ್ಲಿ ನಿಲ್ಲಿನಿದ್ದ ಬೈಕ್​​ನ್ನು ಜಪ್ತಿ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ದಂಡ ಕಟ್ಟಲು ಸಾಧ್ಯವಿಲ್ಲ ಎಂದು ವ್ಯಕ್ತಿ ಹೇಳಿತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ವ್ಯಕ್ತಿ ತನ್ನ ಬೈಕ್​ನ್ನು ಗಲ್ಲಿಯೊಂದರಲ್ಲಿ ನಿಲ್ಲಿಸಿ ತನ್ನ ಮಗಳಿಗೆ ಬರ್ಗರ್ ತರಲು ಹೋಗಿದ್ದಾನೆ. ಈ ವೇಳೆ ನಗರ ಪಾಲಿಕೆ ಸಿಬ್ಬಂದಿಗಳು ಬಂದು ಬೈಕ್​ನ್ನು ಜಪ್ತಿ ಮಾಡಿದ್ದಾರೆ. ನಂತರ ದಂಡ ಪಾವತಿಸಲು ಹೇಳಿದ್ದಾರೆ. ಇದೀಗ ಬೈಕ್ ಮಾಲೀಕ ನಾನು ಸರಿಯಾದ ಜಾಗದಲ್ಲೇ ಬೈಕ್ ನಿಲುಗಡೆ ಮಾಡಿದ್ದೇನೆ. ಹೀಗಿದ್ದೂ ನನ್ನ ವಾಹನವನ್ನು ಜಪ್ತಿ ಮಾಡಿರುವುದು ಸರಿಯಲ್ಲ. ಬೇಕಿದ್ದರೆ ಸಿಸಿಟಿವಿಯನ್ನು ಪರಿಶೀಲಿಸಿ ಎಂದು ಅಧಿಕಾರಿಗಳಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net