ರಾಮ್​ಚರಣ್ ಅಭಿನಯ ಕೊಂಡಾಡಿದ ಫ್ರೆಂಚ್ ಹೀರೋ ಲೂಕಾಸ್ ಬ್ರಾವೋ! ಕಾರಣ ಹೀಗಿದೆ ನೋಡಿ..

ram
Published on

ಪ್ಯಾರಿಸ್​: ಆರ್​ಆರ್​ಆರ್​ ಸಿನಿಮಾದ ಮೂಲಕ ರಾಮ್ ಚರಣ್ ಮತ್ತು ಜೂನಿಯರ್​ ಎನ್‌ಟಿಆರ್ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಈ ಹಿಂದೆ ಹಲವು ಹಾಲಿವುಡ್ ಸೆಲೆಬ್ರಿಟಿಗಳು ಈ ಚಿತ್ರವನ್ನು ಹಾಡಿಹೊಗಳಿದ್ದರೆ, ಇತ್ತೀಚೆಗೆ ಫ್ರೆಂಚ್ ಹೀರೋ ಲೂಕಾಸ್ ಬ್ರಾವೋ ರಾಮ್ ಚರಣ್ ಅಭಿನಯಕ್ಕೆ ಫಿದಾ ಆಗಿದ್ದು, ಅವರನ್ನು ಹೊಗಳಿದ್ದಾರೆ.

ರಾಮ್​ಚರಣ್​ ಅಭಿಮಾನಿಗಳು ಸದ್ಯ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇದರೊಂದಿಗೆ 'ಆರ್​ಆರ್​ಆರ್​' ಹೆಸರು ಮತ್ತೊಮ್ಮೆ ಟ್ರೆಂಡಿಂಗ್ ಆಗಿದೆ.

'ಆರ್​ಆರ್​ಆರ್​' ಚಿತ್ರದಲ್ಲಿ ನಾಯಕ ರಾಮ್ ಚರಣ್ ಅಭಿನಯ ಅದ್ಭುತವಾಗಿದೆ. ಅವರು ಭಾವನಾತ್ಮಕ ದೃಶ್ಯಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿಯೂ ಪ್ರಭಾವ ಬೀರಿದ್ದಾರೆ" ಎಂದು ಲೂಕಾಸ್ ಬ್ರಾವೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ಎಸ್ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್​' ಚಿತ್ರವು 2022 ರಲ್ಲಿ ಬಿಡುಗಡೆಯಾಗಿ 1300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಯಿತು. ಆಸ್ಕರ್ ಪ್ರಶಸ್ತಿಯಲ್ಲೂ ಚಿತ್ರ ಸಾಮರ್ಥ್ಯ ತೋರಿರುವುದು ತಿಳಿದ ಸಂಗತಿಯೇ.

ಸದ್ಯಕ್ಕೆ ರಾಮ್ ಚರಣ್ ಸದ್ಯ 'ಗೇಮ್ ಚೇಂಜರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದಲ್ಲಿ ರಾಜಕೀಯ ಮತ್ತು ಆ್ಯಕ್ಷನ್ ಹಿನ್ನೆಲೆಯಲ್ಲಿ ಪವರ್ ಫುಲ್ ಕಥಾವಸ್ತುವಿನಿಂದ ತಯಾರಾಗುತ್ತಿದೆ. ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡರೆ, ಅಂಜಲಿ, ಶ್ರೀಕಾಂತ್, ಸುನೀಲ್, ಎಸ್‌ಜೆ ಸೂರ್ಯ, ಸಮುದ್ರಖನಿ, ನವೀನ್ ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net