

ಲಖನೌ: ರಸ್ತೆಗಳ ಮೇಲೆ ಹದಿಹರಯದವರ ಹುಚ್ಚಾಟಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಅವರ ಪ್ರಾಣಕ್ಕಷ್ಟೇ ಕುತ್ತು ತರುತ್ತಿಲ್ಲ. ಎದುರಿನಿಂದ ಬರುವವರು, ಅಕ್ಕಪಕ್ಕದಲ್ಲಿ ಚಲಿಸುವವರಿಗೂ ಜೀವ ಹಾರಿಹೋಗುವಂತಾಗುತ್ತಿದೆ. ಇಂತಹ ಘಟನೆಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸದ್ದು ಮಾಡುತ್ತಿದೆ. ಕಾರಿನಲ್ಲಿ ಹೋಗುತ್ತಿದ್ದ ಪ್ರೇಮಿಗಳು ಇದ್ದಕ್ಕಿದ್ದಂತೆ ಟಾಪ್ ಮೇಲೆ ಕಾಣಿಸಿಕೊಂಡು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬನ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಪ್ರೇಮಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಪ್ರಕಾರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಪ್ರೇಮಿಗಳು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಡುರಸ್ತೆಯಲ್ಲೇ ಕಾರಿನ ಛಾವಣಿಯಿಂದ ಎದ್ದು ನಿಂತು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.
ಇಬ್ಬರೂ ಬಹಳ ಹೊತ್ತು ಮೈಮರೆತು ಕಿಸ್ಸಿಂಗ್ನಲ್ಲಿ ತೊಡಗಿದ್ದು, ಇವರ ಕಾರ್ ಹಿಂದೆ ಬರುತ್ತಿದ್ದ ವಾಹನ ಸವಾರರೆಲ್ಲರೂ ಗಾಬರಿಯಾದರು. ಕೆಲವರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಪ್ರೇಮಿಗಳಿಗೆ ಕಾರಿನ ರೂಫ್ ಹಾಕಿರುವಂತಿದೆ’ ಎಂದು ಕೆಲವರು ಹೇಳಿದರೆ, ‘ಇಂತಹ ದೃಶ್ಯಗಳ ವಿಡಿಯೊ ತೆಗೆಯುವುದು ತಪ್ಪು’ ಎಂದು ಮತ್ತೆ ಕೆಲವರು ವಿವಿಧ ರೀತಿಯ ಎಮೋಜಿಗಳನ್ನು ಹಾಕಿ ಕಮೆಂಟ್ ಮಾಡಿದ್ದಾರೆ. ಇವರಿಗೆ ನಾಚಿಕೆಯಾಗಬೇಕು, ಪೊಲೀಸರು ಒಳಗೆ ಹಾಕಬೇಕು ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೊ ಪ್ರಸ್ತುತ 1600 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.