ಮುಂಬೈ: ದೇಶದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕಂಪನಿಯು ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಬಹಿರಂಗಪಡಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 42000ಕ್ಕೂ ಹೆಚ್ಚು ಉದ್ಯೋಗಗಳು ಕಡಿಮೆಯಾಗಿವೆ. ಅವುಗಳಲ್ಲಿ ಹೆಚ್ಚಿನವು ರಿಲಯನ್ಸ್ ರಿಟೇಲ್‌ನಲ್ಲಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಇನ್ನಿಲ್ಲ
ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹಿಂದಿನ ಆರ್ಥಿಕ ವರ್ಷದಲ್ಲಿ 42 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಸಹ ಅದೇ ಹಾದಿ ಹಿಡಿದಿದೆ. ಇಲ್ಲಿ ವರ್ಷದಲ್ಲಿ 42,052 ಉದ್ಯೋಗಿಗಳು ಕಂಪನಿಯನ್ನು ತೊರೆದಿದ್ದಾರೆ. ಅವರು ಇತರ ಸಂಸ್ಥೆಗಳಿಗೆ ಸೇರಿದ್ದಾರೆ ಅಥವಾ ಸಂಸ್ಥೆಯನ್ನು ತೊರೆದಿದ್ದಾರೆ ಎನ್ನಲಾಗುತ್ತಿದೆ.
ಕಂಪೆನಿಯ ವಾರ್ಷಿಕ ವರದಿಯ ಪ್ರಕಾರ, 2023-24 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಉದ್ಯೋಗಿಗಳ ಸಂಖ್ಯೆ 3,47,362 ಆಗಿದೆ. ಈ ಮೊದಲು ಈ ಸಂಖ್ಯೆ 3,89,414 ಆಗಿತ್ತು. ರಿಟೇಲ್ ಉದ್ಯಮದಲ್ಲಿ ಹೆಚ್ಚಿನ ಉದ್ಯೋಗ ವಹಿವಾಟು ನಡೆಯಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ. ಗುತ್ತಿಗೆ, ಪಾರ್ಟ್‌ಟೈಮರ್‌ಗಳು, ಅಪ್ರೆಂಟಿಸ್‌ಗಳು ಮತ್ತು ಇಂಟರ್ನ್‌ಗಳು ಸೇರಿದಂತೆ ಜಿಯೋದಲ್ಲಿ ಶೇಕಡಾ 43 ಕ್ಕಿಂತ ಹೆಚ್ಚು ನಿಯಮಿತವಲ್ಲದ ಉದ್ಯೋಗಿಗಳು ಇದ್ದಾರೆ ಎಂದು ತಿಳಿದುಬಂದಿದೆ. ರಿಲಯನ್ಸ್ ಕಮಿಷನ್ ಆಧಾರಿತ ಉದ್ಯೋಗಿಗಳನ್ನು ಕಡಿತಗೊಳಿಸಿದೆ ಮತ್ತು ಕ್ಷೇತ್ರ ಉದ್ಯೋಗಗಳತ್ತ ಗಮನ ಹರಿಸುತ್ತಿದೆ ಎಂದು ವಿವರಿಸಿದೆ.
ರೆಪೋ ದರ ಸ್ಥಿರ, ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆ ಇಲ್ಲ! ಆರ್ಬಿಐ ಉದ್ದೇಶ ಇದೇ ನೋಡಿ..