ಇದ್ದಾಗ ಒಂದಾಗಲೂ ಸಾಧ್ಯವಿಲ್ಲ! ಪರಸ್ಪರ ಕೈಕಟ್ಟಿಕೊಂಡು ಚಲಿಸುವ ರೈಲಿನ ಮುಂದೆ ಜಿಗಿದ ಪ್ರೇಮಿಗಳು ಸಾವು

Untitled-design-2024-06-30T222443.181
Published on

ಜಲೌನ್: ಪರಸ್ಪರ ಪ್ರೀತಿಯಲ್ಲಿದ್ದ ಪ್ರೇಮಿಗಳು ತಾವಿಬ್ಬರು ಈ ಜೀವನದಲ್ಲಿ ಒಂದಾಗಲೂ ಸಾಧ್ಯವಿಲ್ಲ ಎಂದು ತಿಳಿದು, ತಮ್ಮ ಕೈಗಳನ್ನು ಕಟ್ಟಿಕೊಂಡು ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಪ್ರಾಣಬಿಟ್ಟ ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ವರದಿಯಾಗಿದೆ.

ಮೃತ ಯುವಕ ತನ್ನ ಕುಟುಂಬದ ಯುವತಿಯನ್ನೇ ಪ್ರೀತಿಸುತ್ತಿದ್ದ ಎಂದು ಹೇಳಲಾಗಿದ್ದು, ಶನಿವಾರ (ಜೂನ್ 29) ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ. ಪರಸ್ಪರ ಪ್ರೀತಿಸಿದ್ದ ತಮ್ಮನ್ನು ಮನೆಯವರು ಒಪ್ಪದ ಕಾರಣಕ್ಕೆ ಬೇಸತ್ತು, ಇಬ್ಬರು ಸಾವಿನಲ್ಲಿ ಒಂದಾಗುವ ನಿರ್ಧಾರ ಕೈಗೊಂಡು, ದುರಂತ ಅಂತ್ಯ ಕಂಡಿದ್ದಾರೆ.

ವರದಿಗಳ ಪ್ರಕಾರ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಬಾರ್ಡೋಲಿ ಗ್ರಾಮದ ಕಲ್ಪಿ ಕೊಟ್ವಾಲಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ನಗರದ ಸುಶೀಲ್ ನಗರದ ಮನೀಶ್ ಕುಮಾರ್ (23) ಮತ್ತು ದೀಕ್ಷಾ ಗೌತಮ್ (20) ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಪ್ರೇಮಿಗಳು. ಸಂಬಂಧದಲ್ಲಿ ಯುವತಿಗೆ ಆತ ಚಿಕ್ಕಪ್ಪ ಎಂದು ಹೇಳಲಾಗಿದ್ದು, ಇಬ್ಬರ ಪ್ರೀತಿಯನ್ನು ಕುಟುಂಬಸ್ಥರು ದಿಕ್ಕರಿಸಿದರು ಎಂಬ ಕಾರಣಕ್ಕೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net