ಹರೀನಹಳ್ಳಿ ಕೆರೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಬಾಗಿನ ಅರ್ಪಣೆ

IMG-20240630-WA0149
Published on

ಹನಗೋಡು: ಐಟಿಸಿ ಕಂಪನಿ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಅಭಿವೃದ್ಧಿಗೊಳಿಸಿರುವ ಹರೀನಹಳ್ಳಿ ಕೆರೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಬಾಗಿನ ಅರ್ಪಿಸಿದರು.


ಹನಗೋಡು ಹೋಬಳಿಯ ಹರೀನಹಳ್ಳಿಯ ದೊಡ್ಡಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಐಟಿಸಿ ಕಂಪನಿಯು ಸಿಎಸ್‌ಆರ್ ಫಂಡ್ ಮೂಲಕ ಕೆರೆಗಳ ಪುನಶ್ವೇತನ, ಪರಿಸರ ಸಂರಕ್ಷಣೆ, ಸಸಿಗಳ ವಿತರಣೆ, ಸರ್ಕಾರಿ ಶಾಲಾ ಕಟ್ಟಡ, ಶೌಚಗೃಹ ನಿರ್ಮಾಣ, ಕೃಷಿಕರಿಗೆ ಆಧುನಿಕ ಯಂತ್ರೋಪಕರಣಗಳ ಪರಿಚಯ, ಪ್ರಾತ್ಯಕ್ಷಿಕೆ ಹೀಗೆ ಹಲವು ಜನಹಿತ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಪ್ರಶಂಸಿಸಿ, ರೈತರು ಕೆರೆಯನ್ನು ಸಂರಕ್ಷಿಸುವ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳಿ, ತಮ್ಮ ಜಮೀನುಗಳಲ್ಲಿ ಸಸಿಗಳನ್ನು ಬೆಳೆಸಿ ಪರಿಸರ ಉಳಿವಿಗೆ ಕೊಡುಗೆ ನೀಡಿ ಎಂದು ಮನವಿ ಮಾಡಿದರು.


ಐಟಿಸಿ ಕಂಪನಿಯ ಮ್ಯಾನೇಜರ್ ಚನ್ನವೀರೇಶ್ ಮಾತನಾಡಿ, ಕಂಪನಿಯ ಹರೀನಹಳ್ಳಿಯ ದೊಡ್ಡಕೆರೆಯ ಅಭಿವೃದ್ಧಿಯಿಂದಾಗಿ ಸುಮಾರು 250 ಎಕರೆ ಭೂಮಿಗೆ ನೆರವಾಗಲಿದೆ. ಅಂತರ್ಜಲವೂ ವೃದ್ಧಿಸಲಿದೆ ಎಂದರು.


ರೈತರಿಗೆ ಸಸಿ ವಿತರಣೆ:
ಸಮಾರಂಭದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಐಟಿಸಿ ವತಿಯಿಂದ ರೈತರಿಗೆ ಸಿಲ್ವರ್, ಮಹಾಗನಿ, ಹೆಬ್ಬೇವು ಮತ್ತಿತರ ವಿವಿಧ ತಳಿಯ 1500 ಸಸಿಗಳನ್ನು ವಿತರಿಸಲಾಯಿತು.


ರೈತ ಎಚ್.ಸಿ.ಪ್ರಭಾಕರ್ ಆರಾಧ್ಯ ಮಾತನಾಡಿ, ಐಟಿಸಿ ಕಂಪನಿಯು ಹರೀನಹಳ್ಳಿಯಲ್ಲಿ ಭವನ ನಿರ್ಮಿಸಿಕೊಟ್ಟಿದ್ದಾರೆ. ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಕೆರೆ, ಶಾಲೆಗಳ ಅಭಿವೃದ್ಧಿ, ಸುಸ್ಥಿರ ಬೇಸಾಯ ಪದ್ಧತಿ, ಡ್ರಮ್ ಸೀಡರ್ ಮೂಲಕ ಭತ್ತದ ನಾಟಿ ಮಾಡುವ, ಪಾನಿ ಪೈಪ್ ಮೂಲಕ ಕಡಿಮೆ ನೀರಿನಲ್ಲಿ ಭತ್ತದ ಬೆಳೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದನ್ನು ಸ್ಮರಿಸಿದರು.


ಗ್ರಾಪಂ ಅಧ್ಯಕ್ಷ ಹರೀಶ್ ಮಾವುಡು, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಪಾಪಣ್ಣ, ವೆಂಕಟೇಶಯ್ಯ, ಸುಂದ್ರಮ್ಮ ಮಲ್ಲೇಶ್, ಬೀರಪ್ಪ, ಮೀನಾಕ್ಷಿ, ಪಿಡಿಒ ಪ್ರದೀಪ್, ಡೇರಿ ಕಾರ್ಯದರ್ಶಿ ಆನಂದ, ಎಂಎಸ್‌ಕೆ ಕಾರ್ಯಕ್ರಮ ಕಾರ್ಯ ನಿರ್ವಾಹಕಾಧಿಕಾರಿ ಶೇಖ್ ರಿಜ್ವಾನ್, ಔಟ್‌ರಿಚ್ ಸಂಸ್ಥೆಯ ಯೋಜನಾ ಸಂಯೋಜಕರಾದ ಡಿ.ಎಸ್.ನಂಜುಂಡಸ್ವಾಮಿ, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net