ಪತ್ನಿಯನ್ನ ಜಾತ್ರೆಗೆ ಕಳಿಸಿ ಮನೆಗೆ ಬಂದವ ಪರಸ್ತ್ರೀ ಜತೆ ಹೆಣವಾದ! ಆ ಕೋಣೆಯಲ್ಲಿ ನಡೆದಿದ್ದೇನು?

lovers suicide
Published on

ರಾಯಚೂರು: ಪತ್ನಿ ಇಲ್ಲದ ವೇಳೆ ಮನೆಗೆ ಪ್ರೇಯಸಿಯನ್ನು ಕರೆತಂದಿದ್ದ ವ್ಯಕ್ತಿಯೊಬ್ಬ ಆಕೆಯೊಂದಿಗೆ ನೇಣುಬಿಗಿದುಕೊಂಡು ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಹೇಮನೂರು ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಹೇಮನೂರು ಗ್ರಾಮದ ರಂಗಣ್ಣ(30) ಮತ್ತು ದೇವದುರ್ಗ ಪಟ್ಟಣದ ಯುವತಿ ಮೃತರು. ರಂಗಣ್ಣನಿಗೆ 6 ವರ್ಷದ ಹಿಂದೆಯೇ ಬೇರೊಬ್ಬಳೊಂದಿಗೆ ಮದುವೆ ಆಗಿದೆ. ಆದರೂ ದೇವದುರ್ಗ ಪಟ್ಟಣದ ವಿವಾಹಿತ ಯುವತಿಯೊಂದಿಗೆ ರಂಗಣ್ಣ ಅಕ್ರಮ ಸಂಬಂಧ ಹೊಂದಿದ್ದ. ಹೆಂಡತಿಯನ್ನು ಕೊತ್ತದೊಡ್ಡಿ ಜಾತ್ರೆಗೆ ಕಳುಹಿಸಿದ್ದ ಆತ, ತನ್ನ ಪ್ರೇಯಸಿಯನ್ನ ಮನೆಗೆ ಕರೆತಂದಿದ್ದ. ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನೂ ಓದಿರಿ ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ಮದುವೆಯಾಗಿ ಆರು ವರ್ಷವಾದರೂ ರಂಗಣ್ಣನಾಯಕ್​ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ನಡುವೆ ದೇವದುರ್ಗ ಪಟ್ಟಣದ ಯುವತಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಇವರಿಬ್ಬರೂ ಮನೆ ಕೋಣೆಯಲ್ಲಿ ದುರಂತ ಅಂತ್ಯಕಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತಳ ಹೆಸರು ತಿಳಿದು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ದೇವದುರ್ಗ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net