ಖುಷಿ ಸುದ್ದಿ ಹಂಚಿಕೊಂಡ ಲವ್​ ಮಾಕ್​ಟೇಲ್​ ತಂಡ..

EX1fKjbVcAAC_nA
Published on

ಬೆಂಗಳೂರು: ‘ಲವ್​ ಮಾಕ್​ಟೇಲ್’ ಈ ವರ್ಷದ ಸೂಪರ್​ ಹಿಟ್​ ಸಿನಿಮಾ. ನಿಧಿಮಾ ಮತ್ತು ಆದಿ ಜೋಡಿ ಅಷ್ಟೇ ಮುದ್ದಾಗಿಯೇ ಕಾಣಿಸಿಕೊಂಡು ಕರುನಾಡಿಗರ ಜತೆಗೆ ಪಕ್ಕದ ಟಾಲಿವುಡ್​ ಮಂದಿಗೂ ಇಷ್ಟವಾಗಿತ್ತು. ಇದೀಗ ಇದೇ ಚಿತ್ರ ಯೂಟ್ಯೂಬ್​ನಲ್ಲಿ ದೊಡ್ಡ ಅಂಕಿಯೊಂದನ್ನು ಪಡೆದುಕೊಂಡಿದೆ. ಚಿತ್ರತಂಡದ ಮಟ್ಟಿಗೆ ಇದೊಂದು ಖುಷಿಯ ವಿಚಾರ.

ಹೌದು, ಚಿತ್ರದಲ್ಲಿ ಲವ್​ ಯೂ ಚಿನ್ನ ಹಾಡು ಸೂಪರ್​ ಹಿಟ್ ಆಗಿದೆ. ಅದ್ಯಾವ ಮಟ್ಟಿಗೆ ಅಂದರೆ ಈವರೆಗೂ ಆ ಹಾಡನ್ನೂ 10 ಮಿಲಿಯನ್​ ಅಂದರೆ ಬರೋಬ್ಬರಿ ಒಂದು ಕೋಟಿ ಬಾರಿ ವೀಕ್ಷಣೆಗೊಳಪಟ್ಟಿದೆ. ಹಾಗಾಗಿ ಆ ಖುಷಿಯ ಕ್ಷಣವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಚಿತ್ರದ ನಾಯಕಿ ಮಿಲನಾ ನಾಗರಾಜ್​, ಮೆಲೊಡಿ ಹಾಡನ್ನು ನೀಡಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಮತ್ತು ಡಾರ್ಲಿಂಗ್​ ಕೃಷ್ಣ ಮತ್ತು ಕ್ಯಾಮರಾಮನ್​ ಶ್ರೀಕ್ರೇಜಿಮೈಂಡ್ಸ್​ಗೆ ಧನ್ಯವಾದ’ ಎಂದಿದ್ದಾರೆ.

ಸದ್ಯ ಮಿಲನಾ ಮತ್ತು ಕೃಷ್ಣ ಲವ್​ ಮಾಕ್​ಟೇಲ್​ ಸೀಕ್ವೆಲ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸ್ಕ್ರಿಪ್ಟಿಂಗ್​ ಕೆಲಸ ಶುರುವಾಗಿದ್ದು, ಲಾಕ್​ಡೌನ್​ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net