ಲವ್ ಬ್ರೇಕಪ್​: ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದು, ಬಳಿಕ ತಾನೂ ಗಂಟಲು ಸೀಳಿಕೊಂಡ ಯುವಕ| Murder

ವಿಜಯವಾಣಿ - 2025-10-25T142611.844
Published on

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ 24 ವರ್ಷದ ಯುವಕನೊಬ್ಬ ಶುಕ್ರವಾರ ತನ್ನ ಗೆಳತಿ ಜೊತೆಗಿನ ಲವ್ ಬ್ರೇಕಪ್ ಮಾಡಿಕೊಂಡ 8 ದಿನಗಳ ಬಳಿಕ, ಅವಳು ಬೇರೊಬ್ಬನ ಜೊತೆ ಸಂಬಂಧದಲ್ಲಿದ್ದಾಳೆ ಎಂದು ಅನುಮಾನಿಸಿ ಚಾಕುವಿನಿಂದ ಇರಿದು ಕೊಂದಿದ್ದಾನೆ(Murder). ಬಳಿಕ ಅದೇ ಚಾಕುವಿನಿಂದ ತನ್ನ ಗಂಟಲು ಸೀಳಿಕೊಂಡು ಸಾವನ್ನಪ್ಪಿದ್ದಾನೆ ಎಂದು ಶನಿವಾರ(ಅ. 25) ವರದಿಯಾ್ಗಿದೆ.

ಮನೀಷಾ ಯಾದವ್ ಕೊಲೆಯಾದ ಯುವತಿ, ಸೋನು ಬರೈ(24) ತನ್ನ ಗೆಳತಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕ. ಶುಕ್ರವಾರ ಬೆಳಗ್ಗೆ ಬಾರೈ ನರ್ಸಿಂಗ್​ ಹೋಂ ನ ಮುಂದೆ ಈ ಘಟನೆ ನಡೆದಿದೆ. ಬಿಎನ್​ಎಸ್​ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಈ ಕುರಿತು ಮಾತನಾಡಿರುವ ಪೊಲೀಸರು, ಮನೀಷಾ ಮತ್ತು ಸೋನು ಸ್ವಲ್ಪ ಸಮಯದಿಂದ ಇಬ್ಬರು ಸಂಬಂಧದಲ್ಲಿದ್ದರು. ಎಂಟು ದಿನಗಳ ಹಿಂದೆ ಇಬ್ಬರು ಬೇರ್ಪಟ್ಟಿದ್ದರು. ಸೋನು ಬರೈ ಪದೇ ಪದೇ ಮನೀಷಾ ಮೇಲೆ ಅನುಮಾನ ಪಡುತ್ತಿದ್ದನು. ಆಕೆಗೆ ಇನ್ನೊಬ್ಬರ ಜೊತೆ ಸಂಬಂಧವಿದೆ ಎಂದು ಅನುಮಾನ ಪಡುತ್ತಿದ್ದ ಎಂದು ಹೇಳಿದ್ದಾರೆ.

ಶುಕ್ರವಾರ ಸೋನು ತನ್ನ ತಾಯಿಗೆ ತಾನು ಹೊರಗೆ ಹೋಗುತ್ತಿರುವುದಾಗಿ ತಿಳಿಸಿ, ಮನೆಯಿಂದ ಅಡುಗೆ ಚಾಕುವನ್ನು ತೆಗೆದುಕೊಂಡು ಹೋಗಿದ್ದನು. ಬಾರೈ ನರ್ಸಿಂಗ್ ಹೋಂ ಬಳಿ ಮನೀಷಾ ಬರ್ತಿದ್ದಂತೆ ಅವಳ ಜೊತೆ ಗಲಾಟೆ ಮಾಡಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ತಾನೂ ಗಂಟಲು ಸೀಳಿಕೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net