ಸೋತು ಮಂಕಾದ ಪ್ರಜ್ವಲ್..!

Prajwal Revanna
Published on

ಬೆಂಗಳೂರು: ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಸುದ್ದಿ ಕೇಳಿ ನಿರಾಸೆಗೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ರಾಜಕೀಯ ಪಿತೂರಿ ನಡೆದರೂ ಚುನಾವಣೆಯಲ್ಲಿ ಗೆಲ್ಲುವುದಾಗಿ ವಿಶ್ವಾಸ ಹೊಂದಿದ್ದ ಪ್ರಜ್ವಲ್, ದೊಡ್ಡ ಅಂತರದಿಂದ ಸೋಲು ಭ್ರಮನೀರಸ ತಂದಿದೆ.

ಚುನಾವಣಾ ಫಲಿತಾಂಶ ತಿಳಿಯಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಜ್ವಲ್ ರೇವಣ್ಣ ಕೋರಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ಫಲಿತಾಂಶದ ಕುರಿತು ನಿರಂತರವಾಗಿ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಒದಗಿಸಿದ್ದರು. ಮತ ಎಣಿಕೆ ಶುರುವಾದ ಆರಂಭದಲ್ಲಿ ಸಮಾಧಾನದಿಂದಲೇ ಇದ್ದ ಪ್ರಜ್ವಲ್ಗೆ ನಾಲ್ಕೈದು ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಗೆಲುವಿನ ಅಂತರ ಕಾಯ್ದುಕೊಂಡ ಸುದ್ದಿ ನೋಡಿ ನಿರಾಸೆಗೊಂಡಿದರು.

ಅಂತಿಮವಾಗಿ ಸೋಲುಂಡ ವಿಚಾರ ತಿಳಿದು ಪ್ರಜ್ವಲ್, ಮುಖ ಕಳೆಹೀನವಾಯಿತು. ಈ ಹಿನ್ನೆಲೆಯಲ್ಲಿ ಮಂಗಳವಾರ ಪ್ರಜ್ವಲ್‌ಗೆ ವಿಶ್ರಾಂತಿಗೆ ಅವಕಾಶ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net