ರೈಲ್ವೆ ಬ್ರಿಡ್ಜ್​ ಕೆಳಗೆ ಅಡ್ಡಾದಿಡ್ಡಿ ನುಗ್ಗಿದ ಲಾರಿ: ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ

accident
Published on

ರಾಯಚೂರು: ಚಿಕ್ಕಸುಗೂರು ಬಳಿಯ ವೈಟಿಪಿಎಸ್ ರೈಲ್ವೆ ಬ್ರಿಡ್ಜ್ ಕೆಳಗೆ ಘಟನೆ ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಬ್ರಿಡ್ಜ್ ಕೆಳಗೆ ರಾಂಗ್ ರೂಟ್‌ನಲ್ಲಿ ಲಾರಿ ಬಂದ ಪರಿಣಾಮ ರಾಯಚೂರಿನಿಂದ ಶಕ್ತಿನಗರಕ್ಕೆ ಹೊರಟಿದ್ದ ಪ್ಯಾಸೆಂಜರ್ ಕ್ರೂಸರ್ ವಾಹನ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಚನ್ನಪ್ಪ(62) ಮತ್ತು ಪಾತಮ್ಮ(45) ಮೃತ ದುರ್ದೈವಿಗಳು. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net