More

    VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

    ಶಿವಮೊಗ್ಗ(ರಿಪ್ಪನ್​ಪೇಟೆ): ಪ್ರಕೃತಿಯ ಒಡಲಲ್ಲಿ ಎಷ್ಟೋ ವಿಸ್ಮಯಗಳು ಅಡಗಿವೆ. ಅಗೋಚರ ಶಕ್ತಿ ಪುಂಜದಂತಿರುವ ಭೂಮಂಡಲದಲ್ಲಿ ಕೌತುಕಗಳಿಗೆ ಬರವಿಲ್ಲ. ಹೀಗೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿರುವುದು ಮುಕ್ಕೋಟಿ ದೇವತೆಗಳ ಅವಾಸ ಸ್ಥಾನವೆಂದೇ ನಂಬಿರುವ ಗೋವು.

    ಹೌದು, ಹೊಸನಗರ ತಾಲೂಕು ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರದ ಪುಂಡಲೀಕ ಶೇಟ್ ಎಂಬುವವರ ಹಸು ಮಾಲೀಕನಿಗೆ ಹಾಲು ನೀಡದೆ ಭತ್ತದ ಗದ್ದೆಯಲ್ಲಿರುವ ಕಲ್ಲಿನ ಮೇಲೆ ನಿತ್ಯವೂ ಹಾಲು ಸುರಿಸಿ ಅಚ್ಚರಿ ಮೂಡಿಸಿದೆ.

    ಎರಡು ತಿಂಗಳ ಹಿಂದೆ ಪುಂಡಲೀಕ ಶೇಟ್ ಸಹೋದರರ ಮನೆಯ ಹಸುವೊಂದು ಚೊಚ್ಚಲ ಗಂಡು ಕರುವಿಗೆ ಜನ್ಮ ನೀಡಿತ್ತು. ಆದರೆ ಹುಟ್ಟಿದ ಸಂದರ್ಭದಲ್ಲೇ ಕರು ಮೃತಪಟ್ಟಿದೆ. ಇದಾದ ನಂತರವೂ ಮಾಲೀಕರು ಒಂದು ತಿಂಗಳು ಕಾಲ ಗೋವಿನಿಂದ ಬೆಳಗ್ಗೆ ಮತ್ತು ಸಂಜೆ ಹಾಲು ಹಿಂಡಿದ್ದಾರೆ. ನಂತರದ ದಿನಗಳಲ್ಲಿ ಗೋವು ಕೆಚ್ಚಲನ್ನು ಬತ್ತಿಸಿಕೊಂಡು ಹಾಲು ಕೊಡುವುದನ್ನೇ ಸ್ಥಗಿತಗೊಳಿಸಿತು. ಕರು ಇಲ್ಲದ ಕಾರಣ ಹೀಗೆ ಆಗಿರಬಹುದೆಂದು ಮನೆಯವರು ಭಾವಿಸಿದ್ದರು. ಹೀಗಿರುವಾಗ ಶೇಟ್ ಅವರ ಅಣ್ಣನ ಮಗ ತಮ್ಮ ಮನೆಯ ಹಸು ಜಮೀನಿನಲ್ಲಿರುವ ಲಿಂಗಮುದ್ರೆ ಕಲ್ಲೊಂದಕ್ಕೆ ಹಾಲು ಸುರಿಸುವ ವಿಶಿಷ್ಟ ವರ್ತನೆ ಗಮನಿಸಿದ್ದಾನೆ. ಬೇರೆಯವರಿಗೆ ತಿಳಿಸಿ ಆಭಾಸವಾಗಬಾರದೆಂಬ ಉದ್ದೇಶದಿಂದ ಇತರರಿಗೆ ತಿಳಿಸದೆ ಮನೆ ಮಂದಿಯೆಲ್ಲ ಒಂದು ವಾರ ಕಾಲ ಗೋವಿನ ಈ ನಡವಳಿಕೆಯನ್ನು ಗಮನಿಸಿದ್ದಾರೆ.

    VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ನೇರವಾಗಿ ಕಲ್ಲಿನೆಡೆಗೆ ಧಾವಂತದಲ್ಲಿ ತೆರಳುತ್ತಿದ್ದ ಹಸು, ಕಲ್ಲಿನ ಬಳಿ ತೆರಳಿ ಸುತ್ತುವರಿದು ಕರುವನ್ನು ಸಂತೈಸುವಷ್ಟೇ ಪ್ರೀತಿಯಿಂದ ಕಲ್ಲನ್ನು ಮುದ್ದಿಸುತ್ತದೆ. ನಂತರ ತನ್ನ ಕೆಚ್ಚಲನ್ನು ಕಲ್ಲಿನ ಮೇಲ್ಭಾಗಕ್ಕೆ ತಾಗಿಸಿಕೊಂಡು ನಿಂತುಬಿಡುತ್ತದೆ. ಈ ಸಂದರ್ಭದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಲನವಲನಗಳನ್ನು ಗಮನಿಸಬಹುದಾಗಿದೆ. ಐದಾರು ನಿಮಿಷಗಳವರೆಗೆ ಈ ಕಾರ್ಯವನ್ನು ಪೂರೈಸಿಕೊಂಡು ಹಾಲಿನ ತೊರೆಯನ್ನು ಇಳಿಸಿಕೊಂಡ ಬಳಿಕ ಮೇಯಲು ತೆರಳುವ ದೃಶ್ಯ ಎಂಥವರಲ್ಲಿಯೂ ಅದ್ಭುತ ಎನಿಸದಿರದು.

    VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?ಆರೂಢ ಪ್ರಶ್ನೆಯಲ್ಲಿ ಕುರುಹು: ಒಂದೂವರೆ ವರ್ಷದ ಹಿಂದೆ ಗ್ರಾಮದ ಶ್ರೀ ಶನೈಶ್ಚರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ದಕ್ಷಿಣ ಕನ್ನಡದ ಪುರೋಹಿತರಿಂದ ಹರತಾಳು ರಾಘವೇಂದ್ರ ಭಟ್ ನೇತೃತ್ವದಲ್ಲಿ ಆರೂಢ ಪ್ರಶ್ನೆಯನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮದ ಹೊರವಲಯದ ಆಗ್ನೇಯ ದಿಕ್ಕಿನಲ್ಲಿ ಲಿಂಗ ಮುದ್ರೆಗಳಿದ್ದು ಇದು ಅನಾದಿ ಕಾಲದ ದೈವಸ್ಥಾನದ ಕುರುಹುಗಳಾಗಿವೆ. ಮುಂದೊಂದು ದಿನ ಆ ಸ್ಥಳ ಜನರಿಗೆ ಗೋಚರಿಸಲಿದ್ದು ಮತ್ತೆ ಪ್ರವರ್ಧಮಾನಕ್ಕೆ ಬರಲಿದೆ ಎಂಬ ಮಾಹಿತಿ ತಿಳಿಸಲಾಗಿತ್ತು. ಅದರ ಸೂಚಕ ಮಾರ್ಗವಾಗಿ ಹಸುವಿನ ಮೂಲಕ ಅಂತಹ ಸ್ಥಳವನ್ನು ದೈವಸ್ವರೂಪಿಯಾಗಿ ಹೊರಜಗತ್ತಿಗೆ ತೋರಿಸುತ್ತಿದೆ ಎಂಬುದು ಕೆಲ ಗ್ರಾಮಸ್ಥರ ಅಭಿಪ್ರಾಯ.

    ಕೌತಕಕ್ಕೆ ಮಾರುಹೋದ ಜನ: ವೈಜ್ಞಾನಿಕ ಯುಗದಲ್ಲೂ ಧಾರ್ವಿುಕ ಆಚರಣೆಗೆ ಇಂಬು ನೀಡುವಂತೆ ಗೋವು ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುವಂತೆ ತಿಂಗಳುಗಳಿಂದ ವರ್ತಿಸುತ್ತಿದೆ. ಲಿಂಗಮುದ್ರೆ ಕಲ್ಲು ಹಾಗೂ ಗೋಮಾತೆಯ ಸಂಬಂಧಗಳ ಘಟನಾವಳಿಗಳು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಇದನ್ನು ನೋಡಲು ಪ್ರತಿದಿನ ನೂರಾರು ಜನ ಸೇರುತ್ತಿದ್ದಾರೆ.

    ನಮ್ಮ ಮನೆಯ ಹಸುವಿನ ಈ ರೀತಿಯ ನಡವಳಿಕೆ ನಮಗೆ ಆಶ್ಚರ್ಯ ಉಂಟುಮಾಡಿದೆ. ಯಾವುದೋ ದೇವರ ಶಕ್ತಿ ಇರಬಹುದೆಂದು ಪುರೋಹಿತರಲ್ಲಿ ಕೇಳಿದಾಗ ಇದು ಶುಭ ಸೂಚನೆಯಾಗಿದ್ದು ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿದೆ ಎಂದಿದ್ದಾರೆ.
    |ಪುಂಡಲೀಕ ಶೇಟ್ ಹಸುವಿನ ಮಾಲೀಕ

    ಮಾನಸಿಕ ಒತ್ತಡ, ಆತಂಕ, ಖಿನ್ನತೆ ಹಾಗೂ ಅಧಿಕ ಕಾರ್ಟಿಸಾಲ್ ಹಾಮೋನು ಸ್ರವಿಸುವುದು ಈ ರೀತಿಯ ವರ್ತನೆಗೆ ಪ್ರಮುಖ ಕಾರಣ. ನಿರ್ದಿಷ್ಟ ಔಷಧ, ನರಮಂಡಲ ಶಮನಕಾರಿ ಔಷಧಗಳನ್ನು ನೀಡುವುದರಿಂದ ಇದನ್ನು ಗುಣಪಡಿಸಬಹುದು. ಇದು ಮಾನಸಿಕ ಅಸಮತೋಲನವಾಗಿದೆ.
    |ಡಾ. ನಾಗರಾಜ್ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ

    ಕೆಲ ವರ್ಷಗಳ ಹಿಂದೆ ಧಾರ್ವಿುಕ ವಿದ್ವಾಂಸರು ಪುರಾತನ ದೇವಾಲಯದ ವಿಷಯವನ್ನು ತಿಳಿಸಿದ್ದರು. ಆದರೆ ಇದು ಎಲ್ಲಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆ ಸ್ಥಳ ಇದೇ ಇರಬಹುದು ಎನಿಸುತ್ತಿದೆ.
    |ಮಂಜುನಾಥ ಗ್ರಾಮಸ್ಥ

    ಇಲ್ಲಿದೆ ನೋಡಿ ಗೋವಿನ ವಿಸ್ಮಯದ ವಿಡಿಯೋ:

     

    VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

    ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts