ಶ್ರೀಕೃಷ್ಣನ ಬೋಧನೆ ಎಲ್ಲರಿಗೂ ಮಾರ್ಗದರ್ಶಿ

ckm krishna 2
ಚಿಕ್ಕಮಗಳೂರಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ತಹಶೀಲ್ದಾರ್ ಸುಮಂತ್ ಉದ್ಘಾಟಿಸಿದರು. ವರಸಿದ್ಧಿ ವೇಣುಗೋಪಾಲ್, ಜಿ.ಎಚ್.ತಿಪ್ಪೇಸ್ವಾಮಿ, ಜಿ.ಕೆ.ಬಸವರಾಜು, ಸೋಮಶೇಖರ್ ಇತರರಿದ್ದರು.
Published on

ಚಿಕ್ಕಮಗಳೂರು: ಶ್ರೀಕೃಷ್ಣ ಸರ್ವರ ಮನದಲ್ಲಿ ಭಗವಂತನ ಸ್ಥಾನದಲ್ಲಿದ್ದಾನೆ. ಮಹಾಭಾರತದ ಮಹತ್ವವನ್ನು ಜಗತ್ತಿಗೆ ಅರ್ಥೈಸುವಲ್ಲಿ ಶ್ರೀಕೃಷ್ಣನ ಪಾತ್ರ ಮಹತ್ವದ್ದು ಎಂದು ತಹಸೀಲ್ದಾರ್ ಸುಮಂತ್ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷ್ಣ ಎಂದರೆ ನೆನೆಪಾಗುವುದು ಭಗವದ್ಗೀತೆ. ಯಾವತ್ತಿದ್ದರೂ ಧರ್ಮ, ನ್ಯಾಯಕ್ಕೆ ಜಯ. ಭಗವದ್ಗೀತೆಯಲ್ಲಿ ಒಬ್ಬ ಮನುಷ್ಯ ತನ್ನ ವೈಯಕ್ತಿಕ ಜೀವನವನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬ ಎಲ್ಲ ಅಂಶಗಳು ಅದರಲ್ಲಿವೆ. ಸರ್ಕಾರಿ ಅಧಿಕಾರಿ, ಸಿಬ್ಬಂದಿ ತನ್ನ ಕರ್ತವ್ಯದಲ್ಲಿ ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ಎಂದು ಹೇಳಿದರು.
ಉಪನ್ಯಾಸಕ ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ಮಾನವನಾಗಿ ಜನಿಸಿದ ಕೃಷ್ಣ ದೈವತ್ವದ ಬದುಕು ಬದುಕಿದ. ನಮಗೆ ಸ್ವಾತಂತ್ರ್ಯ ಬಂದಿದ್ದು ಅಹೋರಾತ್ರಿಯಲ್ಲೇ, ಶ್ರೀಕೃಷ್ಣ ಜನಿಸಿದ್ದು ರಾತ್ರಿಯಲ್ಲೇ. ಹೀಗಾಗಿ ದೇಶವನ್ನು ರಾಕ್ಷಸಿ ತತ್ವಗಳಿಂದ ಮುಕ್ತ ಮಾಡಲು ನಮಗೆ ದೊರೆತ ಸ್ವಾತಂತ್ರ್ಯ ಎಂದು ವಿಶ್ಲೇಷಿಸಿದರು.
ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷಧಾರಿಗಳು ನೋಡುಗರ ಗಮನಸೆಳೆದರು. ನಗರಸಭೆ ಅಧ್ಯಕ್ಷ ಕ್ಷ ವರಸಿದ್ಧಿ ವೇಣುಗೋಪಾಲ್, ಯಾದವ ಸಂಘದ ಜಿಲ್ಲಾಧ್ಯಕ್ಷ ಜಿ.ಎಚ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ.ಕೆ.ಬಸವರಾಜು, ಹಳ್ಳಿಕಾರ್ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net