ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು

Sumalatha HDK
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವಿಧಾನಸಭಾ ಚುನಾವಣಾ ಕಣದಲ್ಲಿ ಸಂಸದೆ ಸುಮಲತಾ ಅಂಬರೀಷ್​ ಅವರು ಜೆಡಿಎಸ್​ ಪಕ್ಷವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೂ ಜೆಡಿಎಸ್​ ನಾಯಕರು ಸುಮ್ಮನಿರುವುದು ಅವರಿಗೆ ವರದಾನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಾದ ತಪ್ಪಿನಿಂದ ದಳಪತಿಗಳು ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ. ಮಾತಿನ ಎಡವಟ್ಟಿನಿಂದ ನಷ್ಟ ಮಾಡಿಕೊಳ್ಳದಂತೆ ಎಚ್ಚರಿಕೆ ನಡೆ ಅನುಸರಿಸುತ್ತಿದ್ದಾರೆ. ಪದೇಪದೆ ಜೆಡಿಎಸ್‌ ನಾಯಕರನ್ನು ಸುಮಲತಾ ಕೆಣಕುತ್ತಿದ್ರು ಏನೂ ಪ್ರತಿಕ್ರಿಯೆ ನೀಡದೆ ಗಪ್ ಚುಪ್ ಆಗಿದ್ದಾರೆ.

ಸುಮಲತಾ ಪದೇಪದೆ ತಮ್ಮ ಮಾತಿನ ಮೂಲಕ ಜೆಡಿಎಸ್ ಟಾರ್ಗೆಟ್ ಮಾಡಿದ್ರೂ ಕೂಡ ತಿರುಗೇಟು ನೀಡಲು ದಳಪತಿಗಳು ಹಿಂದೇಟು ಹಾಕುತ್ತಿದ್ದಾರೆ. ಸ್ವಾಭಿಮಾನ ಇದ್ದವರು ಜೆಡಿಎಸ್‌‌ನಲ್ಲಿ ಇರುವುದಿಲ್ಲ, ಜೆಡಿಎಸ್‌ ನಾಯಕರಿಗೆ ದುರಹಂಕಾರದ ಪರಮಾವಧಿ ಎಂದೆಲ್ಲ ಸುಮಲತಾ ವಾಗ್ದಾಳಿ ನಡೆಸುತ್ತಿದ್ದಾರೆ.

ಸದಾ ಸಂಸದೆ ಸುಮಲತಾ ವಿರುದ್ಧ ಹರಿಹಾಯ್ತಿದ್ದ ಜೆಡಿಎಸ್‌ ಶಾಸಕರು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸುಮಲತಾ ವಿರುದ್ಧ ಅಗ್ರೆಸ್ಸಿವ್ ಆಗಿದ್ದ ರವೀಂದ್ರ ಶ್ರೀಕಂಠಯ್ಯ ಕೂಡಾ ಕೂಲ್ ಕೂಲ್ ಆಗಿದ್ದಾರೆ. ಸುಮಲತಾ ಅಪ್ರಭುದ್ಧ ರಾಜಕಾರಣಿ. ಮೇ 13ರಂದು ಸುಮಲತಾಗೆ ಉತ್ತರ ಕೊಡ್ತೀವಿ. ಮಂಡ್ಯ ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಜೆಡಿಎಸ್‌ ಗೆಲ್ಲಲಿದೆ ಎಂದು ಕೂಲ್​ ಆಗಿಯೇ ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net