ಮೋದಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ; ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಪ್ರೀತಮ್ ಗೌಡ

preetham gowda
Published on

ಹಾಸನ: ಇತ್ತೀಚೆಗೆ ತಾನೆ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ, ಹಾಸನದ ಜನ ವಡ್ಡರು ಎಂದು ಹೇಳಿ ವಿವಾದವನ್ನು ಸೃಷ್ಟಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬಾಂಬ್​ ಸಿಡಿಸಿರುವ ಪ್ರೀತಂ ಗೌಡ, ಜೆಡಿಎಸ್​ಗೆ ಮತ ಹಾಕಿದರೆ ಜೆಡಿಎಸ್​​ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ" ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು "ಮೋದಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಿಮಗೆ ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳ್ತಾ‌ ಇದಿನಿ ಜನತಾ ದಳಕ್ಕೆ ಓಟು ಹಾಕಿದ್ರು ಬಿಜೆಪಿಗೆ ಓಟು ಹಾಕಿದಂಗೆ. ದೇವೇಗೌಡರು ಮೋದಿ‌ಸಾಹೇಬರು ಮಾತ್ನಾಡಿಕೊಂಡಿದ್ದಾರೆ. ಯಾಕೆಂದರೆ ಅವ್ರು ಬರೋದು 20-25 ಸೀಟು ಅಷ್ಟೆ.

ಮತ್ತೆ ಎಲ್ಲಾ ನದಿ ನೀರು ಸಮುದ್ರನೇ ಸೇರೋದು , ನೀವು ಅವ್ರಿಗೆ ಓಟು ಹಾಕಿದ್ರು ಮತ್ತೆ ನನ್ನತ್ರಾನೇ ಬರಬೇಕು. ನೀವು ಬೆಂಗಳೂರು ಹೋಗ್ಬೇಕು ಅಂದ್ರೆ ಮೈಸೂರಿಗೆ ಹೋಗಿ ಹೋಗ್ಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೇಲೆ ಹೋಗಿ ಅಂತ ಹೇಳ್ತಿನಿ

ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳ್ತಿದಿನಿ. ಬಿಜೆಪಿ ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ" ಎಂದು ನೇರವಾಗಿ ಮತದಾರರಿಗೆ ಹೇಳಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net