ಪುಣ್ಯಕ್ಷೇತ್ರ ದರ್ಶನದಿಂದ ಲೋಕಜ್ಞಾನ

srb kanukeri
ಸೊರಬ ಕಾನಕೇರಿ ಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿದರು. ನಾಗರಾಜ್ ಗುತ್ತಿ, ಗಂಗಾಧರಪ್ಪ, ರೇಣುಕಮ್ಮ ಗೌಳಿ, ಕೋಟ್ರೇಶ್ ಸ್ವಾಮಿ ಇತರರಿದ್ದರು.
Published on

ಸೊರಬ: ಪ್ರತಿಯೊಬ್ಬರೂ ಆಧ್ಯಾತ್ಮಿಕ ಭಾವನೆ ಬೆಳೆಸಿಕೊಂಡು ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವುದರಿಂದ ಬೌದ್ಧಿಕ ಜ್ಞಾನ ವೃದ್ಧಿಯಾಗುತ್ತದೆ ಎಂದು ಕಾನಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಚಾಮರಾಜಪೇಟೆಯ ಕಾನಕೇರಿ ಮಠದಲ್ಲಿ ಭಾನುವಾರ ಕಾರ್ತಿಕ ಮಾಸದ ಅಂತಿಮ ದಿನದ ಚಟ್ಟಿ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಭೌತಿಕ, ವೈಚಾರಿಕ ಚಿಂತನೆಗಿಂತ ಬೌದ್ಧಿಕ ಲೋಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಧಾರ್ಮಿಕ ಯಾತ್ರೆ ಕೈಗೊಳ್ಳುವುದರಿಂದ ಮತ್ತು ಪುಣ್ಯಕ್ಷೇತ್ರಗಳ ಸಂದರ್ಶನದಿಂದ ಮನುಷ್ಯನ ಬದುಕಿನಲ್ಲಿ ಗಮ್ಯತೆ ಹೆಚ್ಚುತ್ತದೆ. ನಮ್ಮ ಜೀವನದಲ್ಲಿ ಮಾತು, ಮನಸ್ಸು, ಕೃತಿಗಳು ಒಂದೇ ಆಗಿರಬೇಕು. ತಾರತಮ್ಯವಿದ್ದರೆ ಯಾವುದೇ ಪುಣ್ಯ ಲಭಿಸುವುದಿಲ್ಲ. ಮೋಕ್ಷ ಸಾಧನೆಗೆ ಯಾತ್ರೆಗಳು ಬಹುಮುಖ್ಯ ಎಂದರು.

ಉದ್ಯಮಿ ನಾಗರಾಜ್ ಗುತ್ತಿ, ಟೌನ್ ವೀರಶೈವ ಸಮಾಜದ ಕಾರ್ಯದರ್ಶಿ ಗಂಗಾಧರಪ್ಪ, ರೇಣುಕಮ್ಮ ಗೌಳಿ, ಕೊಟ್ರೇಶ್ ಸ್ವಾಮಿ, ವನಜಾಕ್ಷಮ ್ಮ, ಉಜ್ಜಪ್ಪ, ಬಸವರಾಜ್ ಗೌಡ, ಉಮಾ, ರೇವತಿ, ಪುಷ್ಪಾ, ಸುನೀತಾ, ಸುಧಾ, ಪೂರ್ಣಿಮಾ, ಜಯಮಾಲಾ, ಇಂದೂಧರ, ನಿಜಗುಣ ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net