ಗೌರಿಬಿದನೂರು: ಸಮಯ, ಹಣ ಉಳಿಸಲು ಸೆ.13 ರಂದು ನಡೆಲಿರುವ ಬೃಹತ್ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ರಾಜೀ ಮಾಡಕೊಳ್ಳುವ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದೆಂದು ಸ್ಥಳಿಯ ನ್ಯಾಯಾಲಯದ ನ್ಯಾಯಾಧೀಶ
ಗಣೇಶ್ ತಿಳಿಸಿದರು.
ಗುರುವಾರ ನ್ಯಾಯಾಲಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಅನ್ವಯ ಇದೇ ನ್ಯಾಯಾಲಯದ ಆವರಣದಲ್ಲಿ ಸೆ.13 ರಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಲೋಕ ಅದಾಲತ್ಗಾಗಿ ಮೂರು ಹಂತಗಳಾಗಿ ಪ್ರಕರಣಗಳನ್ನು
ವಿಂಗಡಣೆ ಮಾಡಲಾಗಿದೆ.
ಚೆಕ್ ಅಮಾನ್ಯೀಕರಣ, ಆರ್ಥಿಕ, ವಿದ್ಯುತ್, ಜೀವನಾಂಶ, ಸಿವಿಲ್ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳು, ಮೋಟಾರು, ಭೂಸ್ವಾಧಿನ, ಕಂದಾಯ, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಹಣದ ಅವಶ್ಯಕತೆ
ಇಲ್ಲದೇ ನ್ಯಾಯಾಲಯದ ಮಧ್ಯವರ್ತಿಗಳ ಮೂಲಕ ರಾಜೀ ಮಾಡಿಕೊಂಡು ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.