ಇಂದು ಲಾಕ್​ಡೌನ್ ವಿಸ್ತರಣೆ ಘೋಷಣೆ?

page 1 3
Published on

ನವದೆಹಲಿ: ಕರೊನಾ ಮಟ್ಟಹಾಕಲು ದೇಶಾದ್ಯಂತ ಜಾರಿಯಲ್ಲಿರುವ ಲಾಕ್​ಡೌನ್ ಅವಧಿಯನ್ನು ವಿಸ್ತರಿಸಬೇಕೆಂಬ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಾಕ್​ಡೌನ್ ಅವಧಿ ವಿಸ್ತರಣೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಲಾಕ್​ಡೌನ್ ಅವಧಿ ಏಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಆಗುವುದು ಬಹುತೇಕ ಖಚಿತವಾಗಿದ್ದರೂ ಈಗಾಗಲೇ ಘೋಷಿಸಿರುವಂತೆ ನಿರ್ಬಂಧಗಳಲ್ಲಿ ಯಾವ ಬದಲಾವಣೆ ತರುತ್ತಾರೆಂಬುದೇ ಸದ್ಯದ ಕುತೂಹಲ. ಕೃಷಿ, ಮೀನುಗಾರಿಕೆ, ಶಿಕ್ಷಣ, ಜವಳಿ, ಕೈಗಾರಿಕಾ ವಲಯಕ್ಕೆ ಕೊಂಚ ವಿನಾಯಿತಿ ನೀಡಲಾಗುತ್ತದೆ ಎಂದು ಕೆಲ ವರದಿಗಳು ತಿಳಿಸಿವೆ. ಆದಾಗ್ಯೂ ಸಾಮಾಜಿಕ ಅಂತರ ಮತ್ತು ಶುಚಿತ್ವ ಪಾಲನೆಯ ಕಡ್ಡಾಯ ಷರತ್ತಿಗೆ ಸೀಮಿತವಾಗಿ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಸದ್ಯ ಘೋಷಿಸಲಾಗಿರುವ 21 ದಿನಗಳ ಲಾಕ್​ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ.

ರಾಜ್ಯ ಸಾಧಿಸಿದ್ದೇನು?

* ರಾಜ್ಯದ ತಜ್ಞರ ಪ್ರಕಾರ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಲಾಕ್​ಡೌನ್​ನ ಮೊದಲ ಅವಧಿಯಲ್ಲಿ ನಿಯಂತ್ರಣದಲ್ಲಿದೆ. ಆರಂಭದಲ್ಲಿದ್ದ ಸೋಂಕು ಬೆಳವಣಿಗೆ ದರ ಶೇ.24ರಿಂದ ಶೇ.14-15ಕ್ಕೆ ತಗ್ಗಿದ್ದೇ ಕೊಂಚ ಸಮಾಧಾನಕರ ಸಂಗತಿ

* ಕಾರ್ವಿುಕ ವರ್ಗದವರ ವೇತನ ಕಡಿತ ಮಾಡದಂತೆ, ಕೆಲಸದಿಂದ ತೆಗೆಯದಂತೆ ಆದೇಶ ಹೊರಡಿಸಿ ದೊಡ್ಡ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಿದ್ದು

* ಆರಂಭದಲ್ಲಿ ಸೋಂಕು ವಿಸ್ತರಣೆ ವಿಚಾರದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು, ಈಗ 10 ಸ್ಥಾನದೊಳಗೂ ಇಲ್ಲ

* ಸರ್ಕಾರಿ ನೌಕರರ ವೇತನ ಕಡಿತಗೊಳಿಸದ ನಿರ್ಧಾರ, 150 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ಸಂಗ್ರಹ

ಈ ಹಿಂದೆ ಮಾ.25ರಂದು ಲಾಕ್​ಡೌನ್ ಘೋಷಿಸುವಾಗ ಹಾಗೂ ನಂತರದಲ್ಲಿ ಒಮ್ಮೆ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು.

3 ವಲಯ ವಿಂಗಡಣೆ: ಲಾಕ್​ಡೌನ್ ಅವಧಿ ವಿಸ್ತರಣೆ ವೇಳೆ ದೇಶದಲ್ಲಿನ ಕರೊನಾ ಪ್ರಕರಣಗಳ ಆಧಾರದ ಮೇಲೆ ಎಲ್ಲ ಪ್ರದೇಶಗಳನ್ನು ಕೆಂಪು, ಕೇಸರಿ ಹಾಗೂ ಹಸಿರು ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ. ಕರೊನಾ ಪಸರಿಸುವಿಕೆ ಹಾಗೂ ಪ್ರಕರಣಗಳ ಸಂಖ್ಯೆ ಆಧರಿಸಿ ಆಯಾ ಪ್ರದೇಶಗಳಿಗೆ ವಿಧಿಸಬೇಕಾದ ನಿರ್ಬಂಧ ಮತ್ತು ನೀಡಬೇಕಾದ ವಿನಾಯಿತಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದಾಗ್ಯೂ ಕೆಲ ಸುರಕ್ಷಿತ ಪ್ರದೇಶಗಳಲ್ಲಿ ರೈಲು, ಬಸ್ ಸೇವೆ ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ.

1. ಕೆಂಪು ವಲಯ

ಕರೊನಾ ಪ್ರಕರಣಗಳ ತೀವ್ರತೆ ಹೆಚ್ಚಿರುವ ಹಾಗೂ ಸರ್ಕಾರದಿಂದ ಹಾಟ್​ಸ್ಪಾಟ್​ಗಳು ಎಂದು ಘೋಷಿಸಲ್ಪಟ್ಟ ಪ್ರದೇಶಗಳನ್ನು ಕೆಂಪು ವಲಯದಲ್ಲಿ ಗುರುತಿಸಲಾಗುತ್ತದೆ. ಈ ಸ್ಥಳಗಳಲ್ಲಿ ಎಲ್ಲ ರೀತಿಯ ಚಟುವಟಿಕೆಗಳಿಗೆ ನಿರ್ಬಂಧವಿರುತ್ತದೆ. ಜನರಿಗೆ ಅಗತ್ಯವಾದ ದಿನಬಳಕೆ ವಸ್ತುಗಳನ್ನು ಅವರವರ ಮನೆಗಳಿಗೇ ಪೂರೈಸಲಾಗುತ್ತದೆ. ನಿಯಮ ಮುರಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.

2. ಕೇಸರಿ ವಲಯ

15ಕ್ಕಿಂತ ಕಡಿಮೆ ಕರೊನಾ ಪ್ರಕರಣ ಹೊಂದಿರುವ ಹಾಗೂ ಪ್ರಕರಣಗಳ ಸಂಖ್ಯೆ ಏರಿಕೆ ಆಗದಿರುವ ಸ್ಥಳಗಳನ್ನು ಕೇಸರಿ ವಲಯಕ್ಕೆ ಸೇರಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ಸೀಮಿತ ಸಾರ್ವಜನಿಕ ಸಾರಿಗೆ ಸೌಲಭ್ಯ, ಕೃಷಿ ಚಟುವಟಿಕೆ ಸೇರಿ ಮತ್ತಿತರ ಕೆಲಸಗಳಿಗೆ ಅನುಮತಿ ನೀಡಲಾಗುತ್ತದೆ. ಸಾಮಾಜಿಕ ಅಂತರದ ನಿಯಮದ ಮೇರೆಗೆ ಕೆಲ ಅಂಗಡಿಗಳು, ಇನ್ನಿತರ ಚಟಿವಟಿಕೆಗೂ ಅವಕಾಶ ಇರುತ್ತದೆ.

3. ಹಸಿರು ವಲಯ

ಯಾವ ಜಿಲ್ಲೆಗಳಲ್ಲಿ ಒಂದೂ ಪ್ರಕರಣ ವರದಿಯಾಗಿರುವುದಿಲ್ಲವೋ ಅವುಗಳನ್ನು ಹಸಿರು ವಲಯ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕೇಸರಿ ವಲಯಕ್ಕಿಂತಲೂ ಅನೇಕ ವಿನಾಯಿತಿ ನೀಡಲಾಗುತ್ತದೆ. ಅಲ್ಲದೇ ಮದ್ಯದಂಗಡಿಗಳು ಸರ್ಕಾರಕ್ಕೆ ಆದಾಯದ ಮೂಲವಾಗಿರುವುದರಿಂದ ಇಲ್ಲಿ ಅವುಗಳನ್ನು ತೆರೆಯುವ ಸಾಧ್ಯತೆ ಇದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಬಂಧನೆ ಮೇರೆಗೆ ಕೈಗಾರಿಕೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಕೆಲ ವರದಿಗಳ ಪ್ರಕಾರ ಸದ್ಯ ದೇಶದಲ್ಲಿ 400 ಜಿಲ್ಲೆಗಳಲ್ಲಿ ಯಾವುದೇ ಕರೊನಾ ಪ್ರಕರಣ ವರದಿಯಾಗಿಲ್ಲ.

ಇ-ಕಾಮರ್ಸ್: ್ಞರೋಗ್ಯ ಇಲಾಖೆಯ ನಿಯಮಾವಳಿಗಳನ್ನು ಪಾಲಿಸಲು ಬದ್ಧವಾಗಿರುವಂತೆ, ಇ-ಕಾಮರ್ಸ್ ಸಂಸ್ಥೆಗಳ ಮೇಲಿನ ನಿರ್ಬಂಧ ಸಡಿಲಿಸುವುದು ್ಞಾವುದೇ ರೀತಿಯಲ್ಲಿ ಗ್ರಾಹಕರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಮಗ್ರ ಪ್ಯಾಕೇಜಿಂಗ್ ಅನುಸರಿಸುವುದು

ಕೈಗಾರಿಕೆ ್ಞಟೋಮೇಟೆಡ್-ಯಾಂತ್ರಿಕ ಕೈಗಾರಿಕೆಗಳ ಕಾರ್ಯಾಚರಣೆಗೆ ಅವಕಾಶ ್ಞರ್ದಿಷ್ಟ ಕೈಗಾರಿಕೆಯ ಕಾರ್ವಿುಕ ಸಂಖ್ಯೆಗೆ ಅನುಗುಣವಾಗಿ ಹಂತ ಹಂತವಾಗಿ ಕಾರ್ಯಾರಂಭ ಮಾಡಬಹುದು ್ಞೈಗಾರಿಕೆಯಲ್ಲಿ ಸ್ವಚ್ಛತೆಗೆ ಆದ್ಯತೆ, ಕಾರ್ವಿುಕರಲ್ಲಿ ಕರೊನಾ ಕುರಿತ ಜಾಗೃತಿ ಹಾಗೂ ಕೆಲಸ ಮಾಡುವಾಗ ಸಾಮಾಜಿಕ ಅಂತರ ಕಡ್ಡಾಯ ಪಾಲನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net