

ಬೆಂಗಳೂರು: ಕರೊನಾ ಸೋಂಕು ತಡೆಯುವ ಸಲುವಾಗಿ ಚಾಲ್ತಿಯಲ್ಲಿರುವ ಲಾಕ್ಡೌನ್ ಎರಡನೇ ಅವಧಿಯ ಕೊನೆಯ ಹಂತಕ್ಕೆ ತಲುಪಿದ್ದೇವೆ. ಇನ್ನೇನು ಮೇ 3ರಂದು ಲಾಕ್ಡೌನ್ 2 ಕೂಡ ಮುಗಿಯಲಿದೆ. ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ಗಳಲ್ಲಿ ಹಲವು ರೀತಿಯ ವಿಡಿಯೋಗಳನ್ನು ನೋಡಿಯೆ ಇರುತ್ತೀರಿ. ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಅಲ್ಲಿ ಹಂಚಿಕೊಂಡಿದ್ದಾರೆ.
ಹೌದು.. ಇಷ್ಟು ದಿನ ನೀವೇನು ಮಾಡಿದ್ರಿ? ಆ ಸೆಲೆಬ್ರಿಟಿಗಳ ರೀತಿಯಲ್ಲಿ ಏನಾದ್ರೂ ವರ್ಕೌಟ್ ಮಾಡಿದ್ರಾ? ಕಾಮಿಡಿ ಮಾಡಿದ್ರಾ? ಇನ್ನೇನಾದ್ರೂ ಕ್ರಿಯೇಟಿವ್ ಆಗಿ ಮಾಡಿದ್ರಾ? ಹಾಗೇನಾದರೂ ಇದ್ದರೆ ಅವುಗಳನ್ನು ಪ್ರದರ್ಶಿಸುವುದಕ್ಕೆ ದಿಗ್ವಿಜಯ 24X7 ನ್ಯೂಸ್ ನಿಮಗೊಂದು ವೇದಿಕೆ ಒದಗಿಸುತ್ತಿದೆ. ನೀವು ಕಳುಹಿಸುವ ವಿಡಿಯೋಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ ದಿಗ್ವಿಜಯ 24X7 ನ್ಯೂಸ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ- ನಿಮ್ಮ ಪ್ರತಿಭಾ ಪ್ರದರ್ಶನ, ಹವ್ಯಾಸಗಳನ್ನು ವಿಡಿಯೋ ಮಾಡಿ ವಾಟ್ಸ್ಆ್ಯಪ್ ಮಾಡಿ. ದಿಗ್ವಿಜಯ 24X7 ನ್ಯೂಸ್ ಚಾನೆಲ್ನ ವಾಟ್ಸ್ಆ್ಯಪ್ ಸಂಖ್ಯೆ 7624965555/ 7624965333.