ಎಂಟು ಹೊಸ COVID19 ಪ್ರಕರಣ ಪತ್ತೆ- ಒಟ್ಟು ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆ, ಮರಣ ಪ್ರಮಾಣ 20

corona test
Published on

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ತನಕದ ಅವಧಿಯಲ್ಲಿ ಒಟ್ಟು 8 ಹೊಸ COVID19 ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ಈ ಪೈಕಿ 20 ಮರಣ ಪ್ರಮಾಣವಾದರೆ, 198 ಪ್ರಕರಣಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 20 ಮರಣ ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ರೋಗಿ ಕೋವಿಡ್​ 19 ಯೇತರ ಕಾರಣಕ್ಕಾಗಿ ಮೃತಪಟ್ಟಿದ್ದಾರೆ.

ಎಂಟು ಹೊಸ ಪ್ರಕರಣಗಳ ಪೈಕಿ ಆರು ಪ್ರಕರಣಗಳು ಕಲಬುರಗಿಯಲ್ಲೆ ದೃಢವಾಗಿದ್ದು, ಒಂದು ಗದಗ, ಒಂದು ಬೆಂಗಳೂರಿನಲ್ಲಿ ಖಚಿತವಾಗಿವೆ. ಕಲಬುರಗಿಯ ಪ್ರಕರಣಗಳಲ್ಲಿ ಎಲ್ಲರೂ ಪಿ425ರ ಸಂಪರ್ಕದಿಂದ ಸೋಂಕುಪೀಡಿತರಾದವರಾಗಿರುತ್ತಾರೆ. ಗದಗದ ಪ್ರಕರಣದಲ್ಲಿ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆಯ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ವಿವರ ಲಭ್ಯವಾಗಬೇಕಷ್ಟೆ. ಬೆಂಗಳೂರಿನ ಪ್ರಕರಣದಲ್ಲಿ ವ್ಯಕ್ತಿ 135ನೇ ವಾರ್ಡ್​ಗೆ ಹೋಗಿದ್ದು, ಕಂಟೇನ್​ಮೆಂಟ್ ಝೋನ್​ನಲ್ಲಿ ಸಂಚರಿಸಿದ ಹಿನ್ನೆಲೆ ಇದೆ.

ರಾಜ್ಯದಲ್ಲಿ ನಿನ್ನೆಯೂ ಇದೇ ಅವಧಿಯಲ್ಲಿ ಎಂಟು ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಗೋಚರಿಸುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net