ಕೇವಲ 30 ಸೆಕೆಂಡ್​​ಗಳಲ್ಲಿ ಮತದಾನ ಮುಕ್ತಾಯ..!

election
Published on

ಸ್ಪೇನ್‌: ಕೇವಲ 30 ಸೆಕೆಂಡ್​ಗಳಲ್ಲಿ ಸ್ಥಳೀಯ ಚುನಾವಣೆ ಮುಕ್ತಾಯಗೊಂಡಿರುವ ಅಚ್ಚರಿಯ ಘಟನೆ ಸ್ಪೇನ್‌ನ ಲಾ ರಿಯೋಜಾ ಪ್ರಾಂತ್ಯದ ವಿಲ್​ರೊಯಾ ಎಂಬಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳು ಸ್ಥಳೀಯ ಚುನಾವಣೆಯಲ್ಲಿ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಮತ ಚಲಾಯಿಸಿದ್ದು, ತಮ್ಮ ಹಿಂದಿನ 32 ಸೆಕೆಂಡುಗಳ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ರಾಮದಲ್ಲಿ ಕೇವಲ 7 ನೊಂದಾಯಿತ ಮತದಾರರಿದ್ದಾರೆ.

ಮೇಯರ್ ಸಾಲ್ವಡಾರ್ ಪೆರೆಜ್ ಈ ಕುರಿತು ಮಾತನಾಡಿ, ಗ್ರಾಮದ ನಿವಾಸಿಗಳು ಮತದಾನದ ಕುರಿತು ಸೂಕ್ತ ತರಬೇತಿ ಹಾಗೂ ಪ್ರಜ್ಞೆಯನ್ನು ಹೊಂದಿದ್ದು, ಮತದಾನ ಪ್ರಾರಂಭವಾದ ತಕ್ಷಣ ಗ್ರಾಮಸ್ಥರು ಮತ ಚಲಾಯಿಸಲು ಕೇವಲ 29.53 ಸೆಕೆಂಡ್​ ತೆಗೆದುಕೊಂಡರು ಎಂದಿದ್ದಾರೆ.

ಕೇವಲ ಮೂರು ನೊಂದಾಯಿತ ಮತದಾರರನ್ನು ಹೊಂದಿರುವ ಕ್ಯಾಸ್ಟಿಲ್ಲಾ-ಲಾ ಮಂಚಾದಲ್ಲಿನ ಇಲ್ಲನ್ ಡಿ ವಕಾಸ್ ಎಂಬ ಮತ್ತೊಂದು ಸ್ಪ್ಯಾನಿಷ್ ಹಳ್ಳಿಯೊಂದಿಗಿನ ಸ್ಪರ್ಧೆಯೇ,  ವಿಲ್​ರೊಯಾದಲ್ಲಿ ಬೇಗ ಮತದಾನ ಮುಕ್ತಾಯಗೊಳ್ಳಲು ಕಾರಣವಾಯಿತು ಎಂದು​ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net