ರಾಮಮಂದಿರ ಭೂಮಿಪೂಜೆ ಒಂದು ಐತಿಹಾಸಿಕ...ಭಾವನಾತ್ಮಕ ದಿನ: ಮನದ ಮಾತು ತೆರೆದಿಟ್ಟ ಅಡ್ವಾಣಿ

Advani
Published on

ನವದೆಹಲಿ: ನಾಳೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶ್ರೀರಾಮ ದೇವಸ್ಥಾನ ನಿರ್ಮಾಣವಾಗುತ್ತಿರುವಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ.ಅಡ್ವಾಣಿ ಅವರ ಪಾತ್ರ ತುಂಬ ಮುಖ್ಯವಾದದ್ದು. ಆದರೆ ಕರೊನಾ ಕಾರಣದಿಂದ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ.

ಹೀಗಿರುವಾಗ ಅಡ್ವಾಣಿಯವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಭಾರತ ಪ್ರಬಲ, ಸಮೃದ್ಧ, ಶಾಂತಿ ಹಾಗೂ ಸಾಮರಸ್ಯ ರಾಷ್ಟ್ರವೆಂಬುದನ್ನು ಶ್ರೀರಾಮಮಂದಿರ ಪ್ರತಿನಿಧಿಸುತ್ತದೆ. ಇದು ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತದೆ. ಯಾರೊಬ್ಬರನ್ನೂ ಹೊರಗಿಡುವುದಿಲ್ಲ. ಅತ್ಯುತ್ತಮ ಆಡಳಿತದ ತಿರುಳಾಗಿರುವ ರಾಮರಾಜ್ಯವನ್ನು ಪ್ರವೇಶಿಸಲು ನಮಗೆ ದಾರಿ ತೋರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…

ಶ್ರೀರಾಮ ಅನುಗ್ರಹ, ಘನತೆ ಮತ್ತು ಮರ್ಯಾದೆಯ ಮೂರ್ತರೂಪ. ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುತ್ತಿರುವುದು ಒಂದು ಐತಿಹಾಸಿಕ ಹಾಗೂ ಭಾವನಾತ್ಮಕ ದಿನ. ಇದು ನನ್ನ ಪಾಲಿಗೆ ಮಾತ್ರವಲ್ಲ. ಇಡೀ ದೇಶದ ಜನರಿಗೆ ಮಹತ್ವವಾದ ದಿನ ಎಂದು ಅಡ್ವಾಣಿ ಹೇಳಿದ್ದಾರೆ.

ಭಾರತೀಯ ಸಾಂಸ್ಕೃತಿಕ ಹಾಗೂ ನಾಗರಿಕ ಪರಂಪರೆಯಲ್ಲಿ ಶ್ರೀರಾಮನಿಗೆ ಗೌರವಯುತ ಸ್ಥಾನವಿದೆ. ಅವನ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಈ ದೇವಾಲಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net