ಹುದ್ದೆ ಸ್ವೀಕರಿಸಿದ 6 ವಾರಗಳಲ್ಲೇ ರಾಜಿನಾಮೆ ನೀಡಿದ ಬ್ರಿಟಿಷ್ ಪ್ರಧಾನಿ; ಯಾರಾಗಲಿದ್ದಾರೆ ಮುಂದಿನ ಪಿಎಂ?

Liz Truss
Published on

ಲಂಡನ್: ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 6 ವಾರಗಳಲ್ಲೇ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಘೋಷಿಸಿದ್ದಾರೆ. ಇದೀಗ ಅವರು ಅತ್ಯಂತ ಕಡಿಮೆ ಅವಧಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ತೆರವಾಗಿರುವ ಪ್ರಧಾನಿ ಹುದ್ದೆಗೆ ಅ.28 ಒಳಗಾಗಿ ಚುನಾವಣೆ ನಡೆಯಬೇಕು ಎಂದು ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಬ್ರಿಟನ್ನಿನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಇನ್‌ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರ ಹೆಸರು ಮುಂಚೂಣಿಯಲ್ಲಿದೆ. ಅವರು ಕಳೆದ ತಿಂಗಳು ನಡೆದ ಪ್ರಧಾನಿ ಹುದ್ದೆ ಚುನಾವಣೆಯಲ್ಲಿ ಈಗ ಪದತ್ಯಾಗ ಮಾಡಿರುವ ಲಿಜ್ ಟ್ರಸ್ ಅವರಿಗೆ ಸಾಕಷ್ಟು ಪ್ರತಿಸ್ಪರ್ಧೆ ಒಡ್ಡಿದ್ದರು. ಅವರಲ್ಲದೇ ಆರೋಗ್ಯ ಮತ್ತು ವಿದೇಶಾಂಗ ಖಾತೆ ಮಾಜಿ ಸಚಿವ ಜೆರೆಮಿ ಹಂಟ್, ಪೆನ್ನಿ ಮಾರ್ಡಾಂಟ್, ಕೀರ್ ಸ್ಟಾರ್ಮರ್, ಬೋರಿಸ್ ಜಾನ್ಸನ್, ಬೆನ್ ವಾಲೇಸ್ ಮುಂತಾದವರ ಹೆಸರುಗಳೂ ಕೇಳಿಬರುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net