

ತ್ರಿಪುರ: ತ್ರಿಪುರಾದ (Tripura) ಉನಕೋಟಿ ಜಿಲ್ಲೆಯಲ್ಲಿ ಬುಧವಾರ ದೇವರ ರಥಯಾತ್ರೆ ವೇಳೆ ವಿದ್ಯುತ್ ತಂತಿ ಬಿದ್ದು 6 ಜನ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯ ಮಾಹಿತಿಯ ಪ್ರಕಾರ, ರಥಯಾತ್ರೆ ನಡೆಯುವ ವೇಳೆ ವಿದ್ಯುತ್ ತಂತಿ ದಿಢೀರ್ ರಥದ ಮೇಲೆ ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿದ್ದಾರೆ. ಜೀವ ಕಳೆದುಕೊಂಡವರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ವರದಿಯಲ್ಲಿ (Report) ಉಲ್ಲೇಖಿಸಲಾಗಿದೆ.
ರಥದ ಮೇಲೆ ವಿದ್ಯುತ್ ಸ್ಪರ್ಶಿಸಿದ ಬೆನ್ನಲ್ಲೇ ರಥವೂ ಹೊತ್ತಿ ಉರಿದಿದೆ. ಇದರಿಂದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕುಮಾರ್‌ಘಾಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಗಾಯಾಳುಗಳನ್ನು ಉನಕೋಟಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ,(ಏಜೆನ್ಸೀಸ್).