ಟವಲ್ ಹಾಕೋದು ನಿಮ್ಮ ಜಾಯಮಾನ, ನಮ್ಮದಲ್ಲ; ಕಾಂಗ್ರೆಸ್​​ಗೆ ಯತ್ನಾಳ್ ಟಾಂಗ್

basanagowda patil yathnal
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal), ಟವಲ್ ಹಾಕೋದು ನಿಮ್ಮ ಜಾಯಮಾನ, ನಮ್ಮದಲ್ಲ ಎಂದು ಹೇಳುವ ಮುಖೇನ ಕಾಂಗ್ರೆಸ್​​ಗೆ (Congress) ತಿರುಗೇಟು ನೀಡಿದ್ದಾರೆ.

ಈ ಹಿಂದೆ ರಾಜ್ಯ ಕಾಂಗ್ರೆಸ್​​ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾಡಿದ ಟ್ವೀಟ್​​ ಹೀಗಿದೆ, "ಮಾನ್ಯ ನಿರಾಣಿ ಯತ್ನಾಳ್

ಅವರೇ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬಂದ ಎಡಿಟೆಡ್ ವಿಡಿಯೋ ಹಂಚಿಕೊಳ್ಳುತ್ತಿದ್ದೀರಿ, ಬಿಜೆಪಿ ಐಟಿ ಸೆಲ್ ನಿಮಗೂ 2 ರೂ. ಕೊಡುತ್ತಿದೆಯೇ? ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ ಅವರು. ಬೆಲೆ ಏರಿಕೆ, ಇಳಿಕೆಯ ನಿಯಂತ್ರಣವಿರುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ತಾವು, ವಿಪಕ್ಷ ನಾಯಕನ ಸ್ಥಾನಕ್ಕೆ ಟವೆಲ್ ಹಾಕಿದ್ದು ಯಾವ ಅರ್ಹತೆಯಿಂದಲೋ ತಿಳಿಯದು" ಎಂದು ಟ್ವೀಟ್​ (Tweet) ಮಾಡಿ ವ್ಯಂಗ್ಯವಾಡಿತ್ತು.

ಈ ಟ್ವೀಟ್​​ಗೆ ಇದೀಗ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಅವರು, "ಟವಲ್ ಹಾಕೋದು ನಿಮ್ಮ ಜಾಯಮಾನ, ನಮ್ಮದಲ್ಲ. ನಿಮ್ಮಲ್ಲಿ ಯಾರು ಯಾವುದಕ್ಕೆ ಟವಲ್ ಹಾಕಿದ್ರು ಅನ್ನುವ ದೆಹಲಿ ನಾಟಕವನ್ನು ರಾಷ್ಟ್ರವೇ ನೋಡಿದೆ. ನೀವು ಹೇಳಿರುವ ಪ್ರಕಾರ ರಾಜ್ಯದಲ್ಲೂ ಎಲ್ಲಾ ಕಡಿಮೆ ಮಾಡ್ತೀವಿ ಅಂದಿದ್ದಾರಲ್ವಾ, ಮಾಡೋಕ್ಕೆ ಹೇಳಿ! ಅರ್ಹತೆಯನ್ನು ನೀವು ನಿರ್ಧಾರ ಮಾಡುವುದಲ್ಲ. ನಿಮ್ಮಲ್ಲಿ ಏನು ಬೇಕಾದರೂ ಆಗಬಹುದು, ತಿಹಾರ್ ಇಂದ ಬಂದವರೂ ನಾಯಕರಾಗಬಹುದು" ಎಂದು ಕಾಂಗ್ರೆಸ್​​ ಟ್ವೀಟ್​​ಗೆ ಟ್ವೀಟ್​ ಮೂಲಕವೇ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net